ಕುಮಟಾ : ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಚಿಕಿತ್ಸೆ ಒಳಗಾಗಿ, ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಸ್ವಿಡನ್ ಮಹಿಳೆಯ ವರದಿ ನೆಗೆಟಿವ್ ಬಂದಿದೆ.
ಈ ಮೂಲಕ ಆಕೆಗೆ ಕೊರೊನಾ ಇಲ್ಲ ಎಂಬುದು ದೃಢಪಟ್ಟಿದೆ
ಆಕೆಗೆ ಕೆಮ್ಮು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಕೊರೋನಾ ಸೋಂಕು ಇದೇಯಾ ಎನ್ನುವ ಬಗ್ಗೆ ತಪಾಸಣೆ ಮಾಡಲಾಗಿತ್ತು.
ಇದೀಗ ಆಕೆಯ ಸೋಂಕಿನ ಬಗ್ಗೆ ತಪಾಸಣೆ ಕಳುಹಿಸಿದ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಮಹಿಳೆಗೆ ಕೊರೋನಾ ಸೋಂಕು ಇಲ್ಲ ಎನ್ನುವುದು ಧೃಡಪಟ್ಟಿದೆ.