ಕುಮಟಾ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸದಲ್ಲಿ ತಾಲೂಕಿನ ಗುಡೇಅಂಗಡಿಯ ಮಹಿಮಾ ಭಟ್ಟಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು.
ಇವರಿಗೆ ಮಂಗಳೂರು ವಿಶ್ವವಿದ್ಯಾಲಯದ ಪ್ರಾದ್ಯಾಪಕ ಡಾ.ಬೋಜ ಪೂಜಾರಿ ಮಾರ್ಗದರ್ಶನ ನೀಡಿದ್ದರು. ಈಕೆ ಕುಮಟಾ ತಾಲೂಕಿನ ವಾಲಗಳ್ಳಿಯ ಶ್ರೀಪಾದ ಭಟ್ ಹಾಗೂ ಗಿರಿಜಾ ಭಟ್ಟ ಅವರ ಸುಪುತ್ರಿ.
ರಸಾಯನ ಶಾಸ್ತ್ರದಲ್ಲಿ “ಸಿಂಥೆಸಿಸ್ ಮತ್ತು ಬಯೋಲಾಜಿಕಲ್ ಎಕ್ಟಿವಿಟಿ ಆಪ್ ಒಕ್ಷಿಜನ್ ಸಲ್ವರ್ ಮತ್ತು ನೈಟ್ರೋಜನ್ ಕಂಟೇನಿಂಗ್ ಹಿಟಿರೋಸೈಕ್ಲಿಕ್ ಕಂಪೌಂಡ್” ವಿಷಯದಲ್ಲಿ ಪ್ರಬಂಧ ಮಂಡಿಸಿದ್ದರು.