ಕರೊನಾ ವೈರಸ್​ ಪ್ರಪಂಚದಾದ್ಯಂತ ತನ್ನ ಯಮರೂಪ ದರ್ಶನ ಮಾಡಿಸುತ್ತಿದೆ. ಪೂರ್ತಿ ವಿಶ್ವವೇ ವೈರಸ್​ಗೆ ಹೆದರಿ ಮನೆಯೊಳಗೆ ಕುಳಿತಿದೆ. ದೇಶ ಮತ್ತು ರಾಜ್ಯದಲ್ಲಿಯೂ ಸಹ ವೈರಸ್​ನ ದಾಳಿ ಹೆಚ್ಚಾಗಿಯೇ ನಡೆದಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈರಸ್​ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ರಾಜ್ಯದಲ್ಲಿ ಮಾರ್ಚ್​ 14ರಿಂದ ಹೇರಲಾಗಿದ್ದ ನಿರ್ಬಂಧವನ್ನು ಮಾರ್ಚ್​ 31ರವೆಗೆ ಮುಂದುವರೆಸುವುದಾಗಿ ರಾಜ್ಯ ಸರ್ಕಾರ ಆದೇಶಿಸಿದೆ. ಬಿ.ಎಸ್​.ಯಡಿಯೂರಪ್ಪ ನೇತೃತ್ವದ ತುರ್ತು ಸಚಿವ ಸಂಪುಟ ಸಭೆ ಇಂದು ಮುಕ್ತಾಯಗೊಂಡಿದ್ದು ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,

RELATED ARTICLES  ಜಮ್ಮು-ಕಾಶ್ಮೀರ : ಲಡಾಕ್​ನಲ್ಲಿ ಹಿಮಪಾತಕ್ಕೆ ಮೂವರು ಬಲಿ, ಏಳು ಮಂದಿ ನಾಪತ್ತೆ, ಮುಂದುವರಿದ ಶೋಧ ಕಾರ್ಯ.

ಮಾರ್ಚ್​ 14ರಿಂದ ಒಂದು ವಾರದ ಕಾಲ ರಾಜ್ಯವನ್ನು ಅರೆ ಬಂದ್​ ಮಾಡುವುದಾಗಿ ಸರ್ಕಾರ ಆದೇಶಿಸಿತ್ತು. ಅದರಂತೆ ಚಿತ್ರಮಂದಿರಗಳು, ಮಾಲ್​ಗಳು ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿತ್ತು. ಇದೀಗ ಬಂದ್​ನ ಕಾಲಾವಧಿಯನ್ನು ಮಾರ್ಚ್​ 31ರವರೆಗೆ ವಿಸ್ತರಿಸಲಾಗಿದೆ. ಅಲ್ಲಿಯವರೆಗೂ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.

RELATED ARTICLES  ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ಗೊತ್ತಾ? ದಿನಾಂಕ 22-12-2018 ರ ದಿನ ಭವಿಷ್ಯ ಇಲ್ಲಿದೆ.

ರಾಜ್ಯದಲ್ಲಿ ಮುಂದಿನ 13 ದಿನಗಳ ಕಾಲ ಮಾಲ್​, ಚಿತ್ರಮಂದಿರ ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳು ಬಾಗಿಲು ತೆರೆಯುವುದಿಲ್ಲ. ನಗರ ಮತ್ತು ಸ್ಥಳೀಯ ಪಂಚಾಯಿತಿ ಚುನಾವಣೆಗಳನ್ನೂ ಸಹ ಮುಂದೂಡಿರುವುದಾಗಿ ತಿಳಿಸಲಾಗಿದೆ.