ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿದೇಶದಿಂದ ಗೋಕರ್ಣಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಕುಮಟಾ ಉಪವಿಭಾಗಾಧಿಕಾರಿ ಎಂ ಅಜಿತ್ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಮೌಖಿಕವಾಗಿ ಈ ಆದೇಶ ನೀಡಿದರೂ ಗೋಕರ್ಣದಲ್ಲಿ ಹೊಸದಾಗಿ ಬಂದ ವಿದೇಶಿಯರಿಗೆ ವಸತಿಗೃಹಗಳು ಸ್ಥಳ ನೀಡುತ್ತಿದ್ದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವರಂತೂ ಎರಡು ಮೂರು ದಿವಸದ ಹಿಂದೆ ದೇಶ ಬಿಟ್ಟವರಾಗಿದ್ದಾರೆ.
ಅವರಲ್ಲಿ ಫ್ರಾನ್ಸ್ ನ ಇಬ್ಬರು ಸಹ ಇದ್ದಿದ್ದು ಕಳವಳಕ್ಕೆ ಕಾರಣವಾಗಿದೆ. ಅಧಿಕಾರಿಗಳು ತೀವ್ರತೆಯಿಂದ ಕಾರ್ಯ ನಿರ್ವಹಿಸಿದರೂ ಸ್ಥಳೀಯರು ಸಹಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.