ಶಿರಸಿ : ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ನೀಡಲು ಬಂದ ಕಾರಿನ ಚಾಲಕನೊರ್ವ ಕಾರನ್ನು ಕೆರೆಗೆ ಹಾರಿಸಿದ ಘಟನೆ ಶಿರಸಿಯಲ್ಲಿ ನಡೆದಿದೆ.ಪವನ ಎನ್ನುವವರಿಗೆ ಸೇರಿದ ಕಾರು ಇದಾಗಿದೆ.
ಶಿರಸಿ ಪ್ರಾದೇಶಿಕ ಸಾರಿಗೆ ಇಲಾಖೆ ಚಾಲನಾ ಪರವಾನಿಗೆ ಪಡೆಯಲು ಬಂದ ಚಾಲಕನೋರ್ವ ಚಾಲನಾಪ್ರಮಾಣ ಪತ್ರಕ್ಕೆ ಪ್ರಾತ್ಯಕ್ಷಿಕೆ ನೀಡುವಾಗ ಕಾರನ್ನು ಆರ್.ಟಿ.ಓ ಕಚೇರಿ ಪಕ್ಕದ ಬಶೆಟ್ಟಿ ಕೆರೆಗೆ ಹಾರಿಸಿದ್ದಾರೆ.
ಕೆರೆಯಲ್ಲಿ ಬಿದ್ದ ಚಾಲಕನನ್ನು ಓರ್ವ ಯುವಕ ರಕ್ಷಿಸಿದ್ದಾರೆ. ಸ್ವಲ್ಪದರಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.