ದೇಶಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.
ಮಾರ್ಚ್ 22 ರಂದು ಭಾನುವಾರ ಜನತಾ ಕರ್ಫ್ಯೂ ಅವಶ್ಯಕವಿದೆ. ಕೊರೋನಾ ವೈರಸ್ ನಿಂದ ಕಾಪಾಡಿಕೊಳ್ಳಲು ಇದು ಅವಶ್ಯಕ. ಯುದ್ಧಗಳು ನಡೆದ ಸಂದರ್ಭದಲ್ಲಿ ನಗರಗಳು ಬ್ಲಾಕ್ ಔಟ್ ಆಗುತ್ತಿದ್ದವು. ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಲು ಜನತಾ ಕರ್ಫ್ಯೂ ಅಗತ್ಯವಿದೆ ಎಂದು ಹೇಳಿದ್ದಾರೆ.
ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಸಾಧ್ಯವಾದರೆ ಎಲ್ಲಾ ಕೆಲಸಗಳನ್ನು ಮನೆಯಲ್ಲೇ ಮಾಡಿ. ಇದೇ ಭಾನುವಾರ ಯಾರೂ ಹೊರಗೆ ಹೊರಡಬೇಡಿ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜನರಿಂದ ಜನರಿಗಾಗಿ ಜನತಾ ಕರ್ಫ್ಯೂ ಕಡ್ಡಾಯವಾಗಿ ಪಾಲನೆ ಮಾಡಿ ಎಂದು ಮೋದಿ ಮನವಿ ಮಾಡಿದ್ದಾರೆ.