ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನ ದಂತೆ ನಿತ್ಯದ ಮಹಾಪೂಜೆ,ಪರ್ವಕಾಲದ ಉತ್ಸವಗಳು ನಡೆಯುತ್ತಲಿವೆ.

 ಪ್ರಸ್ತುತದಲ್ಲಿ ಕರೋನಾ ರೋಗ ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸರಕಾರದ ಸೂಚನೆಯ ಮೇರೆಗೆ  ಭಕ್ತಜನರಿಗೆ ಗೋಕರ್ಣ ಊರಿಗೇ ಪ್ರವೇಶವನ್ನು ತಡೆಹಿಡಿಯಲಾಗಿದೆ.

ಪರಿಸ್ಥಿತಿ ಬೇಗ ಸುಧಾರಿಸುವಂತೆ ಜಗದೀಶ್ವರನಲ್ಲಿ ಪ್ರಾರ್ಥಿಸಿ ಧಾರಾ ಅಭಿಷೇಕ ಸಮರ್ಪಣೆ ಮಾಡಲಾಗುತ್ತಿದೆ.

        ವಿಶ್ವದಾದ್ಯಂತ ಕರೋನಾ ವೈರಸ್ ಹರಡುತ್ತಿರುವ ಕಾರಣದಿಂದಾಗಿ ನಮ್ಮ ರಾಜ್ಯದಲ್ಲೂ ಈ ವೈರಸ್‍ ಇನ್ನು ಹರಡದಂತೆ ಸರಕಾರವು ಕೈಗೊಂಡ ಮುಂಜಾಗೃತ ಕ್ರಮದಂತೆ ದೇಶದ ಹಿತದೃಷ್ಟಿಯಲ್ಲಿ ಭಕ್ತಾದಿಗಳು ದಯವಿಟ್ಟು ತಮ್ಮ ಶ್ರೀ ಕ್ಷೇತ್ರ ಗೋಕರ್ಣದ ದರ್ಶನವನ್ನು ಮಾರಕವಾದ ವೈರಸ್ ಪ್ರಭಾವ ಪೂಣ೯ವಾಗಿ ನಿಯಂತ್ರಣವಾಗುವ ವರೆಗೆ ಮುಂದೂಡುವಂತೆ ಶ್ರೀ ದೇವಾಲಯದ ಆಡಳಿತದ‌ ಪರವಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ದೇಶ ಮಟ್ಟದಲ್ಲಿ ಸದ್ದು ಮಾಡಿದ ಸುಸಜ್ಜಿತ ಆಸ್ಪತ್ರೆ ಬೇಡಿಕೆ.