ಕಾರವಾರ : ವಿಶ್ವಕ್ಕೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಸ್ ನಿಂದ ತಡೆಗಟ್ಟಿಕೊಳ್ಳುವ ಹಿನ್ನಲೆಯಲ್ಲಿ ಮಾರ್ಚ್ 22ರಂದು ಕಾರವಾರ ನಗರದ ಎಲ್ಲಾ ವ್ಯಾಪಾರ ವಹಿವಾಟು ಸ್ಥಗಿತ ಮಾಡಿ ಜನತಾ ಕರ್ಪ್ಯೂವಿಗೆ ಬೆಂಬಲ ನೀಡುವುದಾಗಿ ಕಾರವಾರದ ವಿವಿಧ ವ್ಯಾಪಾರಸ್ಥರ ಸಂಘಟನೆಗಳು ತಿಳಿಸಿದೆ.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಉದ್ಧೇಶಿಸಿ ಚೇಂಬರ್ ಆಪ್ ಕಾಮರ್ಸ್ ಅಧ್ಯಕ್ಷ ಜಿತೇಂದ್ರ ತನ್ನಾ ಮಾತನಾಡಿ ಕೊರೋನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 22ರಂದು ಜನತಾ ಕರ್ಪ್ಯೂ ಜಾರಿಗೆ ಕರೆ ನೀಡಿದ್ದು ಹೀಗಾಗಿ ಕಾರವಾರದ ಸುಮಾರು 11ಸಂಘಟನೆಗಳು ತಮ್ಮ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಮನೆಯಲ್ಲೆ ಇರುವುದಾಗಿ ತಿಳಿಸಿದ್ದರು.
ಅವತ್ತು ನಾವು ವ್ಯಾಪಾರ ವಹಿವಾಟುಗಳನ್ನ ಬಂದ್ ಮಾಡಿ ಎಲ್ಲೂ ಪ್ರವಾಸಕ್ಕೆ ಹೋಗದೆ ಮನೆಯಲ್ಲೆ ಇದ್ದು, ಕೊರೋನಾ ವೈರಸ್ ವಿರುದ್ಧದ ಅಭಿಯಾನಕ್ಕೆ ನಾವು ಬೆಂಬಲ ನೀಡುವುದಾಗಿ ತಿಳಿಸಿದ್ದರು. ಅದಲ್ಲದೆ ತಮ್ಮ ತಮ್ಮ ಸಂಘಟನೆಗಳ ಮೂಲಕ ತಮ್ಮಲ್ಲಿ ದುಡಿಯುವ ಕಾರ್ಮಿಕರಿಗೆ ಸೇನಿಟೈಜರ್ ಹಾಗೂ ಮಾಸ್ಕ್ ವ್ಯವಸ್ಥೆ ಮಾಡುವುದುದಾಗಿ ಮಾಹಿತಿ ನೀಡಿದ್ದರು.