ಉತ್ತರಕನ್ನಡ ಜಿಲ್ಲೆಯ ಜನತೆಗೆ ಇಂದು ಅತ್ಯಂತ ಸಂತಸದ ದಿನ, ಜಿಲ್ಲೆಯ ಬಹುದಿನದ ಕನಸಾಗಿದ್ದ ಅಂಕೋಲಾ – ಯಲ್ಲಾಪುರ – ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣಕ್ಕೆ ಇದ್ದ ದೊಡ್ಡ ಅಡೆ-ತಡೆ ನಿವಾರಣೆಯಾಗಿದೆ. ರಾಜ್ಯ ವನ್ಯಜೀವಿ ಮಂಡಳಿಯಿಂದ ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಕೇಂದ್ರ ವನ್ಯಜೀವಿ ಮಂಡಳಿಗೆ ರಾಜ್ಯದಿಂದ ಪ್ರಸ್ತಾವನೆ ಕಳುಹಿಸಿದ ನಂತರ ಅಂತಿಮವಾಗಿ ಅನುಮೋದನೆಯಾಗಲಿದೆ.

RELATED ARTICLES  ಕಾರವಾರ ಸಗಟು ಮಳಿಗೆಯಲ್ಲಿ ಅಸಮರ್ಪಕ ಮಾಹಿತಿ: ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು.

ಜಿಲ್ಲೆಯ ಯುವಕರ ಬಹುದಿನದ ಕನಸಾಗಿದ್ದ ಅಂಕೋಲಾ – ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣಕ್ಕೆ ಇದ್ದ ದೊಡ್ಡ ಅಡೆ-ತಡೆ ನಿವಾರಣೆಯಾಗಿದೆ. ರಾಜ್ಯ ವನ್ಯಜೀವಿ ಮಂಡಳಿಯಿಂದ ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಿ, ಅಂತಿಮ ಒಪ್ಪಿಗೆಗೆ ಕೇಂದ್ರ ವನ್ಯಜೀವಿ ಮಂಡಳಿಗೆ ಕಳಿಸಲಾಗುವುದು. ರೈಲು ಮಾರ್ಗ ನಿರ್ಮಾಣವಾಗುವ ಕನಸು ನನಸಾಗಲು ಇನ್ನೊಂದೇ ಹೆಜ್ಜೆಯ ಅಂತರವಾಗಿದೆ.

RELATED ARTICLES  ಅಪಘಾತ : ಬೈಕ್ ಸವಾರ ಸಾವು.

ಈ ಸಂದರ್ಭದಲ್ಲಿ ಸಂಸದರಾದ ಅನಂತಕುಮಾರ ಹೆಗಡೆಯವರು ಮುಖ್ಯಮಂತ್ರಿಗಳಾದ ಬಿ‌.ಎಸ್.ಯಡಿಯೂರಪ್ಪ ನವರಿಗೆ ವಿಶೇಷವಾಗಿ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.