ಹೊನ್ನಾವರ: ಜನತಾ ವಿದ್ಯಾಲಯ ಕಡತೋಕಾ, ಹೊನ್ನಾವರದ ಪೂರ್ವ ವಿದ್ಯಾರ್ಥಿಗಳು “ಜೆ.ವಿ.ಕೆ.ಪರ್ಲ್ಸ್ ” ಎಂಬ ವಾಟ್ಸ್ಯಾಪ್ ಗುಂಪು ರಚಿಸಿಕೊಂಡು, ತಾವು ಕಲಿತ ಶಾಲೆಯು ತಮಗೆ ನೀಡಿದ ಶಿಕ್ಷಣ ಮತ್ತು ಜೀವನಶಿಕ್ಷಣದ ಸ್ಮರಣೆಯಲ್ಲಿ ಹಲವು ಇತ್ಯಾತ್ಮಕ ಕಾರ್ಯ ಮಾಡುತ್ತಿದ್ದಾರೆ.
ಯಕ್ಷಗಾನ ಕಲಾವಿದರಾದ ಶ್ರೀ ಶ್ರೀಪಾದ ಹೆಗಡೆ ಹಡಿನಬಾಳ ಅವರಿಗೆ ಆದ ಅಪಘಾತದ ಪರಿಣಾಮವಾಗಿ ತುಂಬಾ ಸಂಕಷ್ಟದಲ್ಲಿದ್ದುದನ್ನು ಶ್ರೀಮತಿ ಲಲಿತಾಲಕ್ಷ್ಮೀ ನಾರಾಯಣ ಭಟ್ಟ ಅವರಿಂದ ತಿಳಿದ “ಜೆ.ವಿ.ಕೆ.ಪರ್ಲ್ಸ್” ವಾಟ್ಸ್ಯಾಪ್ ತಂಡದ ಸದಸ್ಯರು ಸ್ವ ಖುಷಿಯಿಂದ ಹಣ ಸಂಗ್ರಹಿಸಿದರು. ತಮ್ಮ ನೇತಾರರಾದ ಶ್ರೀ ಜಿ ಆರ್ ಭಟ್ಟ ಧರ್ಮಶಾಲಾ ಹಾಗೂ ಶ್ರೀಮತಿ ಶಾರದಾ ಶರ್ಮ ಇವರ ನೇತೃತ್ವದಲ್ಲಿ ರೂ. 85000 =00 ದ ಚೆಕ್ ನ್ನು ಶ್ರೀಯುತರಿಗೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಜಿ ಆರ್ ಭಟ್ಟ, ನಿವೃತ್ತ ಶಿಕ್ಷಕರು, ಜೆವಿಕೆ
ಶ್ರೀ ಎನ್ ಪಿ ಭಟ್ಟ, ನಿವೃತ್ತ ಶಿಕ್ಷಕರು, ಎಸ್ ಆರ್ ಪ್ರೌಢಶಾಲೆ, ಬಿಳಗಿ.
ಶ್ರೀಮತಿ ಶ್ರೀಮತಿ ಭಾಗ್ವತ್, ಶ್ರೀಮತಿ ಶಾರದಾ ಶರ್ಮ, ಶ್ರೀಮತಿ ಲಲಿತಾಲಕ್ಷ್ಮೀ ಭಟ್ಟ, ಶ್ರೀಮತಿ ನಾಗರತ್ನಾ ಭಾಸ್ಕೇರಿ, ಶ್ರೀ ಎಂ.ಡಿ.ವಿನಾಯಕ– ಜೆವಿಕೆಯ ಪೂರ್ವ ವಿದ್ಯಾರ್ಥಿಗಳು ಇದ್ದರು.
“ಸಂಕಷ್ಟದಲ್ಲಿದ್ದಾರೆ, ಸಹಾಯ ಮಾಡೋಣವೇ?” ಎಂಬ ವಿಚಾರ ಹೇಳಿದ ತಕ್ಷಣ ಹಣ ನೀಡಿ, ತಮ್ಮ ಮಾನವೀಯತೆಯನ್ನೂ, ಕಲಾಭಿಮಾನವನ್ನೂ ಮೆರೆದ “ಜೆ.ವಿ.ಕೆ.ಪರ್ಲ್ಸ್ ” ವಾಟ್ಸ್ಯಾಪ್ ಗುಂಪಿನ ಎಲ್ಲ ಸದಸ್ಯರ ಕಾರ್ಯ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ. ಯಕ್ಷಗಾನದಲ್ಲಿ ವಿಶಿಷ್ಟ ಪಾತ್ರಗಳಲ್ಲಿ ಮಿಂಚಿದ ಹಿರಿಯ ಕಲಾವಿದ ಶ್ರೀ ಶ್ರೀಪಾದ ಹೆಗಡೆ ಹಡಿನಬಾಳ ರವರು ಅತ್ಯಂತ ಕಷ್ಟದ ಪರಿಸ್ಥಿತಿ ಯಲ್ಲಿರುವಾಗ ಮಾನವೀಯತೆ ಮೆರೆದ ಈ ಗುಂಪಿನ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆ. ಇವರನ್ನು ಅನುಸರಿಸಿ ಇನ್ನಷ್ಟು ಸಹಾಯ ಸಹಕಾರ ಈ ಹಿರಿಯ ಕಲಾವಿದರಿಗೆ ದೊರೆತಲ್ಲಿ ಅವರ ಕಷ್ಟಕಾಲಕ್ಕೆ ಆಸರೆಯಾದೀತು ಎಂಬುದು ಈ ಗುಂಪಿನ ಆಶಯವಾಗಿದೆ. ಒಬ್ಬ ಕಲಾವಿದನ ಕಷ್ಟ ಅರಿತು ಸಾಮಾಜಿಕ ಜಾಲತಾಣದಲ್ಲಿ ಲೇಖನ ಬರೆದು ಸಹಾಯ ನೀಡುವಂತೆ ಮನವಿ ಮಾಡಿದ ಜೆ.ವಿ.ಕೆ.ವಾಟ್ಸ್ ಆ್ಯಪ್ ಗ್ರೂಪ್ ನ ಎಡ್ಮಿನ್ “ಶ್ರೀಮತಿ ಲಲಿತಾಲಕ್ಷ್ಮೀ ಯವರ ಕಾರ್ಯ ಹಾಗೂ ತಕ್ಷಣ ಹಣ ಸಂಗ್ರಹಿಸಿ ನೀಡಿದ ಗುಂಪಿನ ಸದಸ್ಯರ ಕಾರ್ಯ ನಿಜಕ್ಕೂ ಅಭಿನಂದನಾರ್ಹ”
- ರವೀಂದ್ರ ಭಟ್ಟ ಸೂರಿ