ಕುಮಟಾ: ಗೋಕರ್ಣದಲ್ಲಿ ವಿದೇಶಿಯರಿಗೆ ಗಾಂಜಾ ಮಾರಾಟ ಮಾಡುತಿದ್ದ ಯುವಕನನ್ನು ಗೋಕರ್ಣ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಹಲವು ವರ್ಷಗಳಿಂದ ಈತ ಗೋಕರ್ಣಕ್ಕೆ ಪ್ರವಾಸಕ್ಕೆ ಬರುವ ವಿದೇಶಿಗರಿಗೆ ಗಾಂಜಾ ಮಾರಾಟ ಮಾಡುತಿದ್ದು ಕಚಿತ ಮಾಹಿತಿ ಆಧಾರದಲ್ಲಿ ಗೋಕರ್ಣದ ಪಿ.ಎಸ್.ಐ ನವೀನ್ ನೇತ್ರತ್ವದ ತಂಡ ಗೋಕರ್ಣದ ಮಾರುತಿಕಟ್ಟೆಯ ಬಳಿ ಇರುವ ಶಿವಾ ಇಲೆಕ್ಟ್ರಾನಿಕ್ಸ್ ಅಂಗಡಿಗೆ ದಾಳಿ ನಡೆಸಿ ಅಕ್ರಮವಾಗಿ ಇಟ್ಟಿದ್ದ 142 ಗ್ರಾಮ್ ತೂಕದ ಮೂರು ಸಾವಿರ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದು ಆರೋಪಿ ಶಿವಾನಂ (39) ಎಂಬುವವನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.