ಭಟ್ಕಳ: ತಾಲೂಕಿನ ಆಸರಕೇರಿಯಲ್ಲಿ ನಾಲ್ವರು ಕದ್ದ ಎತ್ತಿನ ಮಾಂಸವನ್ನು ಕತ್ತರಿಸಿಕೊಂಡಿ ಆಟೋದಲ್ಲಿ ಸಾಗಿಸುತ್ತಿದ್ದಾಗ ಮಾಂಸ ಸಮೇತ ಓರ್ವ ಸಿಕ್ಕಿ ಬಿದ್ದಿದ್ದು ಮೂವರು ಪರಾರಿಯಾದ ಘಟನೆ ಶನಿವಾರದಂದು ನಡೆದಿದೆ.
ಆರೋಪಿತರಾದ ಮಹಮ್ಮದ ಗೌಸ್, ಇರ್ಫಾನ್ , ನಿಜಾಮ, ತನ್ವಿರ್, ಎಂದು ತಿಳಿದು ಬಂದಿದೆ. ಇವರೆಲ್ಲರೂ ಎಲ್ಲಿಂದಲೋ ಕದ್ದ ಎತ್ತಗಳನ್ನು ಕಳವು ಮಾಡಿಕೊಂಡು ಬಂದು ಕಟಾವು ಮಾಡಿ ಅವುಗಳನ್ನು 15 ಸಾವಿರ ಮೌಲ್ಯದ ಸುಮಾರು 7.5 ಕೆ.ಜಿ ಆಗುವಷ್ಟು ಮಾಂಸವನ್ನು ಆಟೋ ರಿಕ್ಷಾ ನಂ ಕೆ.ಎ-47/464 ಸಾಗಿಸುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿ ಘಟನೆ ನಡೆದಿದೆ.
ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.