ಮಂಗಳೂರು:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ವ್ಯಕ್ತಿಗೆ ಕೋರೋನಾ ಪಾಸಿಟಿವ್ ಇರುವುದು ದೃಡಪಟ್ಟಿದೆ.
165 ಜನ ಪ್ಯಾಸೆಂಜರ್ ಇದ್ದ ವಿಮಾನದಲ್ಲಿ ದುಬೈ ನಿಂದ ಮಂಗಳೂರಿಗೆ ಮಾರ್ಚ 19 ರ ರಂದು ವಿಮಾನದಲ್ಲಿ ಬಂದಿದ್ದ ಎಂಬ ಮಾಹಿತಿ ದೊರೆತಿದೆ.
ಈತನ ರಕ್ತಮಾದರಿ ತಪಾಸಣೆ ನಡೆಸಿದ್ದು ಇಂದು ಆತನಲ್ಲಿ ಕೊರೋನಾ ಪಾಸಿಟೀವ್ ಇರುವುದು ದೃಡಪಟ್ಟಿದೆ.
ಆತ ಮಂಗಳೂರಿನಿಂದ ಭಟ್ಕಳಕ್ಕೆ ಮರಳುವವನಿದ್ದ ಆದರೇ ಸ್ಥಳೀಯ ಆಡಳಿತದ ಮುಂಜಾಗ್ರತೆಯಿಂದ ವೆನ್ಲಾಕ್ ಆಸ್ಪತ್ರೆ ಐಸೋಲೇಷನ್ ಚಿಕಿತ್ಸೆ ನೀಡಲಾಗುತ್ತಿದೆ.
ಈತನೊಂದಿಗೆ 165ಪಾಸೆಂಜರ್ ಇದ್ದ ಮಾಹಿತಿ ಪಡೆದಿರುವ ಸ್ಥಳೀಯ ಆಡಳಿತ ಯಾರು ಎಲ್ಲಿಗೆ ಯಾವಾಗ ತೆರಳಿದರು ಎನ್ನುವ ಕುರಿತು ಮಾಹಿತಿ ಕಲೆಹಾಕುತ್ತಿದೆ.
ಇನ್ನು ಧಾರವಾಡದಲ್ಲಿ ಸಹ ವ್ಯಕ್ತಿಯೋರ್ವನಿಗೆ ಪಾಸಿಟಿವ್ ಬಂದಿದ್ದು ಆತ ಗೋವಾ ಮೂಲಕ ಕಾರವಾರ ,ಯಲ್ಲಾಪುರದಲ್ಲಿ ಸಮಯ ಕಳೆದು ನಂತರ ಧಾರವಾಡಕ್ಕೆ ತೆರಳಿರುವ ಮಾಹಿತಿ ದೊರೆತಿದೆ.
ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸಹ ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ಕಾರವಾರ ಗೋವಾ ಮಾರ್ಗದ ಸಂಚಾರವನ್ನು ಸಹ ಬಂದ್ ಮಾಡಲಾಗಿದ್ದು ರಾಜ್ಯದ,ಜಿಲ್ಲೆಯ ಗಡಿಭಾಗದಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ.