ಕುಮಟಾ : ಇಂದು ಬೆಳಿಗ್ಗೆ ನಿಧನರಾದ ಎಂ.ಆರ್.ಹೆಗಡೆ ಹೊಲನಗದ್ದೆ ಇವರ ಮನೆಗೆ ಲಾಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ತಂಡವು ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿತು.

ಕುಟುಂಬದವರ ಸಹಕಾರದಿಂದ ಮೃತರ ನೇತ್ರಗಳನ್ನು ಸಂಗ್ರಹಿಸಿದ ಡಾ.ಮಲ್ಲಿಕಾರ್ಜುನ ರವರ ತಂಡವು ನೇತ್ರದಾನಿ ಎಂ.ಆರ್.ಹೆಗಡೆ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಿ, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.

RELATED ARTICLES  ಶ್ರೀ ಯೋಗೀಶ್ವರ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ

ಈ ಸಂದರ್ಭದಲ್ಲಿ ಲಾಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ, ಕುಮಟಾದ ಪ್ರಖ್ಯಾತ ವೈದ್ಯರಾದ

ಡಾ.ಅನಿಲ ಹೆಗಡೆ, ಡಾ.ರವಿರಾಜ ಕಡ್ಲೆ
ಮುಂತಾದ ಊರಿನ ಗಣ್ಯರನೇಕರು ಇದ್ದರು.

RELATED ARTICLES  ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿರಾಯ? : ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಹಾಗೂ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.