ಹೊನ್ನಾವರ: ಕಾಸರಗೋಡು ಸ್ನೇಹಕುಂಜದ ಮಾಜಿ ಅಧ್ಯಕ್ಷರು ಪರಿಸರ ವಾದಿಗಳು ಆಗಿರುವ ಎಂ. ಆರ್. ಹೆಗಡೆ ಸೋಮವಾರ ಮುಂಜಾನೆ 6.30 ಕ್ಕೆ ತಮ್ಮ ಮನೆ ಹೊಲನಗದ್ದೆಯಲ್ಲಿ ನಿಧನ ರಾದರು.ದಿ. ಎಂ. ಆರ್. ಹೆಗಡೆ ಮೋಹನ್ ಅಣ್ಣ ಎಂದೇ ಊರಲ್ಲಿ ಚಿರ ಪರಿಚಯ ರಾಗಿದ್ದರು. ಮಹಾತ್ಮಾ ಗಾಂಧಿ ಹೈಯ್ ಸ್ಕೂಲ್ ಚಿತ್ರಗಿಯಲ್ಲಿ ದೈಹಿಕ ಶಿಕ್ಷಕ ರಾಗಿ ತಮ್ಮ ವೃತ್ತಿ ಜೀವನ ಆರಂಭ.. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾರ್ಥಕ ಬದುಕನ್ನು ಕಟ್ಟುವ ಬಗ್ಗೆ ಮನವರಿಕೆ ಮಾಡುತ್ತಿದ್ದರು.
ತಾವು ಶಿಕ್ಷಕರು ರಾಗಿದ್ದ ಅವಧಿಯಲ್ಲಿ ಹೈಸ್ಕೂಲ್ ಹಿಂಭಾಗದ ಅರಣ್ಯಜಾಗದ ಬೋಳು ಗುಡ್ಡವನ್ನು ಪರಿಸರ ಪ್ರೇಮಿ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ್ ಮಾಡುತ್ತ ಹತ್ತಾರು ಎಕರೆ ಜಾಗವನ್ನು ಅರಣ್ಯವನ್ನಾಗಿ ಮಾಡಿದ್ದರು. ಬಡವರೇ ಹೆಚ್ಚಾಗಿ ಬರುತ್ತಿದ್ದ ಈ ಶಾಲೆಯಲ್ಲಿ ಮಧ್ಯಾಹ್ನ ಮನೆಗೆ ಊಟಕ್ಕೆ ಹೋಗದೆ ಇದ್ದ ವಿದ್ಯಾರ್ಥಿಗಳು ಉಪಹಾರ ತರದ ಸಂದರ್ಭದಲ್ಲಿ ತಾವು ತಂದ ತಿಂಡಿಯನ್ನೆ ಅವರಿಗೆ ನೀಡಿ ಉಪ ಚರಿಸುತ್ತಿದ್ದರು… ತಮ್ಮ ಇಳೆ ವಯಸ್ಸಿನಲ್ಲಿಯೂ ಪರಿಸರ ಕ್ಕಾಗಿ ಹೋರಾಟ ಮಾಡುತ್ತಿದ್ದರು.. ಹೊಲನಗದ್ದೆಯ ಗಾಂಧಿ ವನದಲ್ಲಿ ಆಡುವ ಮಕ್ಕಳು ಹಾಗೂ ಸುತ್ತಲಿನ ಶಾಲಾ ಮಕ್ಕಳ ಕ್ರೀಡಾ ಕೂಟ ನಡೆಯುತ್ತಿರುತ್ತದೆ. ಮಕ್ಕಳು ಬಿಸಲಿ ನಲ್ಲಿ ಇರುವದನ್ನು ತಿಳಿದು ಮೇಯ್ದಾನದ ಸುತ್ತಲೂ ಗಾಳಿತೋಪು ನಿರ್ಮಿಸಿ ಅನುಕೂಲ ಮಾಡಿ ಕೊಟ್ಟಿದ್ದು ಎಂ. ಆರ್. ಹೆಗಡೆ ಮಾಸ್ಟ್ರ ಗಾಳಿ ತೋಪು ಎಂದೇ ಕರೆಯಲಾಗುತ್ತಿದೆ.ಪ್ರತಿ ವರ್ಷ ಮನೆ -ಮನೆಗೆ ತೆರಳಿ ಗಿಡ ನೆಡಲು ಪ್ರೋತ್ಸಾಹ ನೀಡುತ್ತಿದ್ದರು.ತದಡಿ ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರ. ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ಸ್ಥಳೀಯರನ್ನು ಒಗ್ಗೂಡಿಸಿ ತಡೆಯುವಲ್ಲಿ ಯಶಸ್ಸುಕಂಡಿದ್ದರು… ಇದರಿಂದ ರಾಜ್ಯದಲ್ಲೇ ಹೆಗಡೆ ಮನೆಮಾತಾಗಿದ್ದರು. ಇಂದು ಹೆಗಡೆಯವರನ್ನು ಕಳೆದು ಕೊಂಡ ಸ್ಥಳೀಯ ಹರಿಕಂತ್ರ. ಅಂಬಿಗ. ಮೀನುಗಾರ ಸಮಾಜ ಇತ್ಯಾದಿ ಹಿಂದುಳಿದ ಸಮಾಜದ ಜನರು ಅಳುತ್ತಿರುವದು ಎಂ. ಆರ್. ಹೆಗಡೆಯವರ ಸಮಾಜ ಸೇವೆಯ ನೆನಪಿಸುತ್ತಿದೆ.ಹಿಂದುಳಿದ ಮುಕ್ರಿ ಇತ್ಯಾದಿ ಸಮಾಜದವರು ಜಾತಿ ಬೇಧ ಇಲ್ಲದೆ ಹೆಗಡೆಯವರ ಮನೆಯಲ್ಲಿ ಕುಡಿಯುವ ನೀರು ತುಂಬುವದರಿಂದ ಹಿಡಿದು ಎಲ್ಲ ಕೆಲಸ ಮಾಡುತ್ತಿದ್ದು ತಾಲೂಕಿನಲ್ಲಿ ನೈಜ ಸುಧಾರಕರೆಂದರೆ ಮನೆಮಾತಾಗಿದ್ದರು.
ತಳಿತಜ್ಞ :ಕೃಷಿಕ ರಾಗಿದ್ದ ಇವರು ತಳಿತಜ್ಞ ಎಂಬ ಪರ್ಯಾಯ ಹೆಸರನ್ನು ಪಡೆಯಿದ್ದರೂ. 16 ಹೆಚ್ಚು ತಳಿಯ ಭತ್ತದ ತಳಿ ಸಂಗ್ರಹ ಇವರಲ್ಲಿತ್ತು.. ಉಪ್ಪುಮಿಶ್ರಿತ ಮಣ್ಣಿನಲ್ಲಿ ಯಾವ ತಳಿಯ ಶೇಂಗಾ ಉತ್ತಮ ಇಳುವರಿ ಬರುತ್ತದೆ ಎಂದು ಪ್ರಯೋಗ ಮಾಡಿದ್ದ ಹೆಗಡೆ ಯವರ ಶ್ರಮ ತಿಳಿದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹಾಗೂ ಶಿವಮೊಗ್ಗದ ದ ಕೃಷಿ ವಿಜ್ಞಾನಿಗಳು ಎಂ. ಆರ್. ಹೆಗಡೆ ಅವರ ಗದ್ದೆಗೆ ಬಂದು ಮಾಹಿತಿ ಪಡೆದು ಇತರ ಜಿಲ್ಲೆಯ ರೈತರಿಗೂ ಮಾಹಿತಿ ನೀಡಿದ್ದು ಒಂದು ಸಾಧನೆಯೇ ಹೌದು.. ಇವರು ವಿಶಿಷ್ಟ ತರಕಾರಿ ತಳಿಯನ್ನು ಉಳಿಸಿಕೊಂಡು ಅದರ ಬೀಜವನ್ನು ಉಚಿತವಾಗಿ ರೈತರಿಗೆ ನೀಡಿ ಅವುಗಳ ಬೆಳೆಯುವ ವಿಧವನ್ನು ಮನವರಿಕೆ ಮಾಡುತ್ತಿದ್ಫರು.ತಮ್ಮ ಇಳಿಯವಯಸ್ಸಲ್ಲು ಜಿಲ್ಲೆ.. ರಾಜ್ಯದಾದ್ಯಂತ ಸುತ್ತಿ ಪರಿಸರದ ಬಗ್ಗೆ ಜಾಗ್ರತಿ ಮೂಡಿಸುತ್ತಿದ್ದರು… ಉತ್ತರಕನ್ನಡ ಜಿಲ್ಲೆಯ ವಿಶಿಷ್ಟ ಉಪ್ಪಿನ ಕಾಯಿ ತಳಿಯನ್ನ ಜಿಲ್ಲೆಯಾದ್ಯಂತ ರಕ್ಷಿಸುವಲ್ಲಿ ಇನ್ನಿಲ್ಲದ ಶ್ರಮ ಪಟ್ಟಿದ್ದರು.. ಅದೆಷ್ಟೋ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕವನ್ನು ತಾವೇ ತುಂಬಿ ಪುಸ್ತಕ ಇತ್ಯಾದಿ ಕೊಡಿಸಿ ಶಿಕ್ಸಣಕ್ಕೆ ಪ್ರೋತ್ಸಾಹ ನೀೀಡಿದರು.
ಇವರಿಂದ ಸಹಾಯ ಪಡೆದ ಅದೆಷ್ಟೋ ಜನರು ದೇಶ.. ವಿದೇಶ ದಲ್ಲಿದ್ದರು. . ಊರಿಗೆ ಬಂದಾಗ ಇವರ ಆಶಿರ್ವಾದ್ ಪಡೆಯುವದು ಒಂದು ಸಂಪ್ರದಾಯವೇ ಆಗಿತ್ತು.. ಕುಮಟಾದ ಹವ್ಯಕ ವಿದ್ಯಾವರ್ಧಕ ಸಂಘದಲ್ಲಿ ದಿ. Dr. ಟಿ. Ti.ಹೆಗಡೆಯವರೊಂದಿಗೆ ದೀರ್ಘ ಕಾಲದವರೆಗೆ ದುಡಿದು ಬಡ ಹವ್ಯಕರ ಏಳ್ಗೆಗೆ ಕಾರಣರಾಗಿದ್ದರು.. ಅರಣ್ಯ ಇಲಾಖಾ ಅಧಿಕಾರಿಯೊಂದಿಗೆ ಸೇರಿ ಜಿಲ್ಲೆಯಾದ್ಯಂತ ಅರಣ್ಯ ಅಭಿವೃದ್ಧಿಗೆ ಮತ್ತು ಕಾಡು ಪ್ರಾಣಿಗಳ ರಕ್ಷಣೆಗೆ ತಮ್ಮದೇ ಕೊಡುಗೆ ನೀಡಿದ್ದರು. ತಮ್ಮ ಜೀವಿತಾವಧಿಯಲ್ಲಿ ತಾವೇ ಸ್ವಥಹ್ ಲಕ್ಷಾಂತರ ಗಿಡನೆಟ್ಟು ಇತರರಿಗೆ ಮಾದರಿಯಾಗಿದ್ದರು. ಪರಿಸರ ಪ್ರೇಮಿ ಪ್ರಶಸ್ತಿ ಯನ್ನು ನೀಡಿ ಇವರನ್ನು ಗೌರವಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಸನ್ಮಾನಗಳಿಗೆ ಭಾಜನರಾಗಿದ್ದರು.. ವಿಶಿಷ್ಟ ತಳಿಯ ಗೋವು ಗಳನ್ನು ಸಾಕಿದ್ದರು.. ಎರೆಹುಳು ಗೊಬ್ಬರ ಇತ್ಯಾದಿ ಸ್ವತಃ ನಿರ್ಮಿಸಿ ರೈತ ರಿಗೆ. ಕೃಷಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದರು. ಇಂತಹ ಅಪರೂಪ ವ್ಯಕ್ತಿತ್ವದ ಪರಿಸರ ಪ್ರೇಮಿ.. ಸಮಾಜ ಸುಧಾರಕರನ್ನ ಕಳೆದುಕೊಂಡ ಜಿಲ್ಲೆ ಬಡವಾಗಿದೆ.
ದಿ. ಎಂ. ಆರ್. ಹೆಗಡೆ ಯವರಿಗೆ ಕರ್ನಾಟಕ ಪರಿಸರ ಪ್ರೇಮಿ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನೀಡಿ ಗೌರವಿಸಲಾಗಿತ್ತು. ಖ್ಯಾತ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಪ್ರಶಸ್ತಿ ಪ್ರದಾನ್ ಮಾಡಿದ್ದರು. ಈಸಂದರ್ಭದಲ್ಲಿ ಪರಿಸರ ಹೋರಾಟಗಾರ ಆಗಿನ ಪಶ್ಚಿಮ್ ಘಟ್ಟ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನಂತ್ ಹೆಗಡೆ ಅಶೀಸರ ಇದ್ದರು. (ಎಂ. ಆರ್. ಹೆಗಡೆ ಅನೇಕ ಸಮಾಜ ಸುಧಾರಣಾ ನಾಟಕದಲ್ಲೂ ಪಾತ್ರ ಮಾಡಿ ಸಮಾಜ ಸುಧಾರಣೆಗೆ ಪ್ರಯತ್ನ ಮಾಡಿದ್ದರು. ತಮ್ಮ ಕಣ್ಣುಗಳನ್ನು ದಾನಮಾಡಿ ಮಾದರಿ ಯಾಗಿದ್ದಾರೆ.