ದಿನಾಂಕ 24/03/2020 ರಿಂದ ಮಾರ್ಚ 31 ರ ವರೆಗೆ ಕಲಂ 144 CRPC ಅಡಿ ಕರ್ನಾಟಕದಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ನಗರದ ಸಾರ್ವಜನಿರಲ್ಲಿ ಪೊಲೀಸ್ ಪ್ರಕಟಣೆ
1) ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಸೇರುವ ಎಲ್ಲಾ ವ್ಯವಹಾರಗಳನ್ನು ನಿರ್ಬಂದಿಸಲಾಗಿದೆ.
2) ಸಾರ್ವಜನಿಕರು ಅನವಶ್ಯಕ ವಾಗಿ ರಸ್ತೆಯ ಮೇಲೆ ಬರತಕ್ಕದ್ದಲ್ಲ.
3)ಸಾರ್ವಜನಿಕ ಸ್ಥಳದಲ್ಲಿ ಯಾವುದೇ ತಿಂಡಿ ತಿನಿಸು ಆಹಾರ ಮಾರಾಟ/ಸರಬರಾಜು ಮಾಡತಕ್ಕದ್ದಲ್ಲ.
4) ಅವಶ್ಯಕ ಸೇವೆ ಹೊರತುಪಡಿಸಿ ಬೇರೆ ಯಾವುದೇ ಅಂಗಡಿ ಮುಗ್ಗಟ್ಟು ಗಳನ್ನು ತೆರೆಯತಕ್ಕದ್ದಲ್ಲ.
5) ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ,ಹ್ಯಾಂಡ ಗ್ಲೌಸ್,ಹ್ಯಾಂಡ ಸ್ಯಾನಿಸೆಟರ್ ಧರಿಸತಕ್ಕದ್ದು.
6) ಪ್ರತಿಯೊಬ್ಬ ಸಾರ್ವಜನಿಕರು ಒಬ್ಬರಿಂದ ಒಬ್ಬರಿಗೆ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಂಡು ಇರತಕ್ಕದ್ದು.
7) ತರಕಾರಿ, ಹಾಲುಉತ್ಪನ್ನ, ಮಾಂಸ ಮೀನು ಮೊಟ್ಟೆ ಉತ್ಪನ್ನ, ಆಹಾರ /ಉಪಹಾರ, ಔಷಧೀಯ/ವೈದ್ಯಕೀಯ, ಇತರ ಅವಶ್ಯಕ ಸೇವೆಗಳನ್ನು ಮನೆ – ಮನೆಗೆ ನೀಡುವ ವ್ಯವಸ್ಥೆ ಮಾಡಲಾಗಿದೆ ಈ ಬಗ್ಗೆ ಶಿರಸಿ ಪೊಲೀಸ್ ಇನ್ ವೆಬ್ ಸೈಟ್ ನಲ್ಲಿ ದೊರೆಯುವ ಸೇವೆಗಳ ಮಾಹಿತಿಯನ್ನು ಶೀಘ್ರದಲ್ಲೇ ಒದಗಿಸಲಾಗುತ್ತದೆ.
8)ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಜನ ಸೇರುವ ಸಭೆ, ಸಮಾರಂಭ,ಮೆರವಣಿಗೆ ನಾಟಕ,ಸಿನೆಮಾ, ಮನರಂಜನೆ, ವಿನೋದ,ಕ್ಲಬ್,ಬಾರ್,ರೆಸ್ಟೋರೆಂಟ್,ಸಂಪೂರ್ಣವಾಗಿ ನಿರ್ಬಂದಿಸಲಾಗಿದೆ.
9) ಹೊಟೆಲ್, ಖಾನಾವಳಿ,ಗಳಲ್ಲಿ ಪಾರ್ಸೆಲ್ ಸೇವೆ ಮಾತ್ರ ಲಬ್ಯ.
10) ವಾರ್ಡವಾರು ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಗ್ರಾಹಕರು ತಮ್ಮ ತಮ್ಮ ವಾರ್ಡಗಳಲ್ಲೆ ತರಕಾರಿ ಖರೀದಿಸಬಹುದು, ವಿಕಾಸ ಆಶ್ರಮ,ಬಿಡಕಿ ಬೈಲ್ ನಲ್ಲಿ ತರಕಾರಿ ಮಾರಾಟ ರದ್ದು ಪಡಿಸಲಾಗಿದೆ.
11) ಸರಕಾರಿ ಮತ್ತು ಖಾಸಗಿ ಬಸ್ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ.
12)ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಸಾರ್ವಜನಿಕರು ಸರಕಾರಿ ಕಛೇರಿ ಗಳಿಗೆ ಅನವಶ್ಯಕ ಭೇಟಿ ನೀಡುವಂತಿಲ್ಲ.
13)ಆಸ್ಪತ್ರೆಗಳಿಗೆ ವೈದ್ಯಕೀಯ ಚಿಕಿತ್ಸೆ ಕುರಿತು ಬರುವವರು ಸುರಕ್ಷತಾ ಸಾಮಗ್ರಿಗಳನ್ನು ಅಳವಡಿಸಿಕೊಂಡು ರೋಗಿಯ ಜೊತೆ ಒಬ್ಬರು ಮಾತ್ರ ಸಹಾಯಕರಾಗಿ ಬರಬಹುದಾಗಿದೆ.
14)ಹಾಲು,ಮೊಸರು,ಮೀನು,ತರಕಾರಿ,ಮಾಂಸ,ಮೊಟ್ಟೆ,ದಿನಸಿ ಅಂಗಡಿ,ಎ.ಟಿ.ಎಮ್.ಆಹಾರ,ಉಪಹಾರ ಸೇವಾ ಸ್ಥಳಗಳಲ್ಲಿ ಸಂಬಂದಪಟ್ಟವರು ಪ್ರತಿ ಗ್ರಾಹಕರು ಒಂದು ಮೀಟರ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳತಕ್ಕದ್ದು.
15) ಕಾಲ ಕಾಲಕ್ಕೆ ಸರಕಾರ/ಜಿಲ್ಲಾಡಳಿತ/ಪೊಲೀಸ್ ಇಲಾಖೆಯಿಂದ ಬರುವ ಸೂಚನೆಗಳನ್ನು ಪಾಲಿಸತಕ್ಕದ್ದು ತಪ್ಪಿದಲ್ಲಿ ಬಲಪ್ರಯೋಗ ಮಾಡಲಾಗುವುದು ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.