ಕಾರವಾರ: ಈ ಎಲ್ಲಾ ಕರೋನಾ ಭೀತಿಯ ನಡುವೆಯೂ ಉತ್ತರ ಕನ್ನಡದವರೂ ಕರೋನಾ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈಗೊಂದು ಆಘಾತಕಾರಿ ಸುದ್ದಿಯನ್ನು ಜಿಲ್ಲಡಳಿತ ಸ್ಪಷ್ಟಪಡಿಸಿದೆ.
ಕಳೆದ ತಿಂಗಳು ದುಬೈ ನಿಂದ ಮಂಗಳೂರಿಗೆ ಬಂದವರು ಹಾಗೂ ಇನ್ನೋರ್ವ ಮುಂಬೈ ಮೂಲಕ ಭಟ್ಕಳಕ್ಕೆ ಆಗಮಿಸಿದ ವ್ಯಕ್ತಿಗೆ ಕರೋನಾ ಸೋಂಕು ದೃಡಪಟ್ಟ ಕುರಿತು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಸುದ್ದಿಗೋಷ್ಠಿ ಮೂಲಕ ಹೇಳಿಕೆ ನೀಡಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ವೈರೆಸ್ ಪತ್ತೆಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಪೀಡಿತರು ಓರ್ವ 40 ಹಾಗೂ ಅರವತ್ತೈದು ವಯಸ್ಸಿನವರಾಗಿದ್ದಾರೆ. ಜಿಲ್ಲೆಯ ಭಟ್ಕಳ ನಗರದ ಜಾಲಿ ಮತ್ತು ಸಿದ್ದೀಕ್ ಸ್ಟ್ರೀಟ್ ನವರು ಎಂದು ಮೂಲಗಳು ಹೇಳಿದೆ.