ಭಟ್ಕಳ :ತಾಲೂಕಿನ ಗೊರಟೆಯ ಮನೆಯೊಂದಲ್ಲಿ ಹಾಡುಹಗಲೇ ಹೆಂಚು ತೆಗೆದು ಒಳ ಹೊಕ್ಕು ಮಾಂಗಲ್ಯ ಸರ ಹಾಗೂ ಇತರೆ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ಜನತೆಯನ್ನು ಬೆಚ್ಚಿ ಬೀಳಿಸಿದೆ.

ರಾಮಕೃಷ್ಣ ಖಾರ್ವಿ ಎನ್ನುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

RELATED ARTICLES  ಬೋಟ್ ನಿಂದ ಕಾಲುಜಾರಿ ಬಿದ್ದು ಸಾವು..!

ಮನೆಯ ಯಜಮಾನ ತಮ್ಮ ಮಗಳನ್ನು ಅಜ್ಜಿ ಮನೆಯಿಂದ ಕರೆದುಕೊಂಡು ಬರಲು ತೆರಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು, ಮನೆಯ ಹಿಂಬದಿಯಲ್ಲಿ ಬಂದು ಹೆಂಚನ್ನು ತೆಗೆದು ಒಳಗೆ ಪ್ರವೇಶಿಸಿದ್ದಾರೆ.

RELATED ARTICLES  ದಶಮಾನೋತ್ಸವ ಆಚರಿಸಿಕೊಂಡ ಜಿ ಎಸ್ ಬಿ ಸೇವಾ ಟ್ರಸ್ಟ್ ಹೊಳೆಗದ್ದೆ

ಮನೆಯ ಕೋಣೆಯಲ್ಲಿದ್ದ ಕಪಾಟನ್ನು ಮುರಿದು, 45 ಗ್ರಾಂ ಚಿನ್ನದ ಮಾಂಗಲ್ಯ ಸರ, 2 ಎ.ಟಿ.ಎಂ ಕಾರ್ಡ್, 3 ಎಲ್‌ಐಸಿ ಬಾಂಡ್, ಪಾನ್ ಕಾರ್ಡ್ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ ಈ ಬಗ್ಗೆ ಪ್ರಕರಣ ದಾಖಲಾಗಿದೆ.