ಕಾರವಾರ: ಕೊರೋನಾ ವೈರಸ್ ಹರಡುವಿಕೆ ತಡೆಯಲು ದೇಶದಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ. ಜನರು ತಮ್ಮ ತಮ್ಮ ಮನೆಯಲ್ಲಿ ಇರುವಂತೆ ತಿಳಿಸಲಾಗಿದೆ. ಆದರೂ ಕೆಲವರು ಅಗತ್ಯ ವಿಲ್ಲದೇ ವಾಹನದಲ್ಲಿ ತಿರುಗಾಡುತ್ತಿರುವ ವಿಚಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಣಿಸಿದೆ.
ಲಾಕ್ ಡೌನ್ ಇರುವ ವೇಳೆ ಜಿಲ್ಲೆಯಲ್ಲಿ ಅನಗತ್ಯವಾಗಿ ವಾಹನದಲ್ಲಿ ಓಡಾಡಿದ್ರೆ ಲೈಸನ್ಸ್ ಹಾಗೂ ವಾಹನದ ನೊಂದಣಿ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ ನೀಡಿದ್ದಾರೆ. ಜನತೆಗೆ ಖಡಕ್ ಎಚ್ಚರಿಕೆ ನೀಡಿದ ಅವರು ಜನತೆ ಲಾಕ್ ಡೌನ್ ಗೆ ಸಹಕರಿಸುವಂತೆ ಹೇಳಿದರು.