ಭಟ್ಕಳ: ಬೆಳಿಗ್ಗೆ ಶೌಚ ಕಾರ್ಯಕ್ಕೆಂದು ಸಮುದ್ರ ತೀರಕ್ಕೆ ತೆರಳಿದ ವೇಳೆ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಕರಿಕಲ್ ನಲ್ಲಿ ನಡೆದಿದೆ. ಮಂಜುನಾಥ ದುರ್ಗಪ್ಪ ನಾಯ್ಕ ಸಾವನ್ನಪ್ಪಿದ ದುರ್ದೈವಿ ಎನ್ನಲಾಗಿದೆ.
ಮನೆಯ ಪಕ್ಕದಲ್ಲಿ ಈತ ಬೆಳಿಗ್ಗೆ ಶೌಚಕ್ಕೆಂದು ಸಮುದ್ರದತ್ತ ಹೋಗಿದ್ದ. ಈ ವೇಳೆ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾನೆ. ಮ್ರತನಿಗೆ ಸರಿಯಾಗಿ ಈಜಲು ಬಾರದ ಹಿನ್ನೆಲೆ ವ್ಯಕ್ತಿ ನೀರಿಗೆ ಬಿದ್ದು ಮ್ರತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.