ಕಾರವಾರ: ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರೂ ಕೂಡ ಸುಖಾ ಸುಮ್ಮನೆ ಮನೆಯಿಂದ ಹೊರಗೆ ಬರಬಾರದು. ಔಷಧಿ, ದಿನಸಿ ಸಾಮಾನು ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆಗೇ ತಲುಪಿಸಲು ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಮೊಹಮ್ಮದ್ ರೋಶನ್ ಹೇಳಿದ್ದಾರೆ.
ಕಾರವಾರದ ಸರ್ದಾರ್ ಜಿ ಪೆಟ್ರೋಲ್ ಬಂಕ್ ಗೆ ಭೇಟಿ ನೀಡಿದ ಅವರು ಸರ್ಕಾರಿ ವಾಹನಗಳಿಗೆ ಹಾಗೂ ಕೊರೋನಾ ಸಂಬಂಧ ಕರ್ತವ್ಯದಲ್ಲಿರುವವರನ್ನು ಹೊರತುಪಡಿಸಿ ಬೇರೆ ಯಾರಿಗೂ ಪೆಟ್ರೋಲ್ ನೀಡದಂತೆ ಪೆಟ್ರೋಲ್ ಬಂಕ್ ಗಳ ಮಾಲೀಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಹೀಗಾಗಿ ಜನತೆ ಸುಖಾ ಸುಮ್ಮನೆ ಓಡಾಡುವುದುನ್ನು ಬಿಡಬೇಕು. ಕಟ್ಟು ನಿಟ್ಟಿನ ಆದೇಶವನ್ನು ಪಾಲಿಸಬೇಕು. ಇದು ಜನತೆಯ ಒಳಿಗಾಗಿಯೇ ಈ ಕ್ರಮ ಎಂದು ಅವರು ತಿಳಿಸಿದರು.