ಭಾರತ ಲಾಕ್ ಡೌನ್ ಆಗಿದ್ದು ಎಲ್ಲೆಡೆ ಬಿಗಿ ಬಂದೋಬಸ್ತ ಏರ್ಪಡಿಸಲಾಗಿದೆ. ಮನೆಯ ಒಳಗೇ ಇರುವಂತೆ ಸೂಚನೆ ನೀಡಿದ್ದರೂ ಹೊರಬಂದು ಓಡಾಟ ಮಾಡುವವರಿಗೆ ಪೋಲೀಸರು ಲಾಟಿ ರುಚಿ ತೋರಿದ್ದಾರೆ. ಆದರೆ ಅದರ ಜೊತೆ ಉತ್ತರ ಕನ್ನಡದ ಪೋಲೀಸರು ಮಾನವೀಯತೆ ಮೆರೆದಿದ್ದಾರೆ.
ಭಟ್ಕಳದಲ್ಲಿ ಇನ್ನೂ ಡಿವೈಎಸ್ಪಿ ಗೌತಮ್ ಕೆ.ಸಿ. ನೇತ್ರತ್ವದಲ್ಲಿ ಪಿಎಸ್ಐ, ಕಾನ್ಸಟೇಬಲ್ಸಗಳು ಭಿಕ್ಷುಕರಿಗೆ ನೀರು, ಬ್ರೆಡ್, ತಿಂಡಿ, ಊಟವನ್ನು ನೀಡಿ ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ.
ಇದರ ಜೊತೆಗೆ ಕುಮಟಾ, ಹೊನ್ನಾವರ ಹಾಗೂ ಇನ್ನೂ ಹಲವೆಡೆ ಪೋಲೀಸರು ಮಾನವೀಯತೆ ಮೆರೆದು ಜನರಿಂದ ಶಹಬ್ಬಾಶ್ ಪಡೆದಿದ್ದಾರೆ.