ಉತ್ತರಕನ್ನಡ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮದ ನಡುವೆಯೂ, ಕೊರೊನಾ ಸೋಂಕಿನ ಭಯ ಹೆಚ್ಚುತ್ತಿದೆ. ಭಟ್ಕಳ ಮೂಲದ ಇನ್ನೊಬ್ಬರಿಗೆ ಕೋರೊನಾ ಇರೋದು ಶಿವಮೊಗ್ಗ ಲ್ಯಾಬ್ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಆದ್ರೆ, ಈ ಪ್ರಕರಣದ ಪುನರ್ ಪರಿಶೀಲನೆಗಾಗಿ ಪೂಣಾ ಲ್ಯಾಬ್ ಗೆ ಕಳುಹಿಸಲಾಗಿದೆ. ನಾಳೆ ರಿಪೋರ್ಟ್ ಬಂದನಂತರ ಖಚಿತ ಮಾಹಿತಿ ನೀಡುವುದಾಗಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ ಮಾಹಿತಿ ನೀಡಿದ್ದಾರೆ.