ಯಲ್ಲಾಪುರ: ಗಂಗಾಧರ ಕೃಷ್ಣ ಭಟ್ಟ ದಾವಣಮನೆ ಇವರ ಮನೆ ಹಾಗೂ ಕೊಟ್ಟಿಗೆಗೆ ಸಿಡಿಲು ಬಡಿದ ಪರಿಣಾಮ ಕೊಟ್ಟಿಗೆ ಸುಟ್ಟು ಸಂಪೂರ್ಣ ಕರಕಲಾಗಿರುವ ಘಟನೆ ತಾಲೂಕಿನ ಕಣ್ಣಿಗೇರಿ ಪಂಚಾಯತ ವ್ಯಾಪ್ತಿಯ ಬೊಂಬ್ಡಿಕೊಪ್ಪದಲ್ಲಿ ನಡೆದಿದೆ.
ಸಿಡಿಲು ಬಡಿದ ಪರಿಣಾಮ ಕೊಟ್ಟಿಗೆಯಲ್ಲಿ 3 ಮಿನಿ ಟ್ರಕ್ ಹುಲ್ಲು ಇತ್ತು. ಮೂರುವರೆ ಸಾವಿರ ಹಂಚು ಇದ್ದ ಕೊಟ್ಟಿಗೆ ಸುಟ್ಟಿದೆ. ಅಲ್ಲದೇ ಮನೆಯಲ್ಲಿದ್ದ 8 ಚೀಲ ಚಾಲಿ ಅಡಿಕೆ, ಮಿಕ್ಸರ್, ಗ್ರ್ಯಾಂಡರ್ ಸೇರಿದಂತೆ ಇನ್ನೂ ಹಲವು ವಸ್ತುಗಳು ಅಗ್ನಿಗಾಹುತಿಯಾಗಿದೆ.
ಈ ಕುರಿತು ತಹಶೀಲ್ದಾರ ಡಿ.ಜಿ.ಹೆಗಡೆ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳಿಸಿ ಪರಿಶೀಲನೆ ನಡೆಸಿದ್ದಾರೆ.