ಯಲ್ಲಾಪುರ: ಇಂದು ಯಲ್ಲಾಪುರದ ತಾಲೂಕಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಚಿಕಿತ್ಸೆಗಾಗಿ ಮಾಡಿರುವ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ” ಹೋಮ್ ಕೊರಂಟೈನ್ ” ನಲ್ಲಿ ಇರುವವರ ಬಗ್ಗೆ ಸಚಿವ ಶಿವರಾಮ ಹೆಬ್ಬಾರ್ ಮಾಹಿತಿ ಪಡೆದರು.
ಜಿಲ್ಲಾಆರೋಗ್ಯ ಅಧಿಕಾರಿ ಡಾ. ಅಶೋಕ ಕುಮಾರ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಯಲ್ಲಾಪುರ, ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಗಾಗಿ ” 50 ಹಾಸಿಗೆಯ ಪ್ರತ್ಯೇಕ ಬೆಡ್ ” ವ್ಯವಸ್ಥೆ ಮಾಡಬೇಕು ಎಂದು ಹಾಗೂ ಆಸ್ಪತ್ರೆಗೆ ಬೇಕಾಗಿರುವ ಎಲ್ಲಾ ವ್ಯವಸ್ಥೆ ಮಾಡುವಂತೆ ಹಾಗೂ ಅವಶ್ಯಕತೆ ಇರುವ ವೈದ್ಯಕೀಯ ಪರಿಕರಗಳನ್ನು, ಔಷಧಿಗಳನ್ನು ಅತಿ ಶೀಘ್ರದಲ್ಲಿ ಪೂರೈಕೆಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ವಿಜಯ ಮಿರಾಶಿ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಕಮಲಾಕರ ನಾಯ್ಕ ಹಾಗೂ ಡಾ. ದೀಪಕ್ ಭಟ್ ತಾಲೂಕಿನ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.