ಭಟ್ಕಳ: ನಗರ ಹಾಗು ಗ್ರಾಮಾಂತರ ಪ್ರದೇಶದಲ್ಲಿ ಹೈವೇ ಪ್ರಾಧಿಕಾರ ಈ ಹಿಂದೆ ಮಾಡಿದ ಸರ್ವೇ ಪ್ರಕಾರವೇ 30 ರಿಂದ 45 ಮೀಟರ್ ಅಗಲೀಕರಣ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆಯು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.
ಭಟ್ಕಳದಲ್ಲಿ ರಾಷ್ಟೀಯ ಹೆದ್ದಾರಿ ಅಗಲಿಕರಣವನ್ನು, ಈಗಾಗಲೇ ಐ.ಆರ್.ಬಿ. ಕಂಪನಿ ವಹಿಸಿಕೊಂಡು ಗ್ರಾಮಾಂತರ ಹಾಗು ನಗರದ ಭಾಗಗಳಲ್ಲಿ ಅಗಲೀಕರಣದ ಕಾಮಗಾರಿಯನ್ನು ಕೈಗೊಂಡಿದೆ. ಈಗಾಗಲೆ ತಾಲೂಕಿನಾದ್ಯಂತ ಹೆದ್ದಾರಿ ಅಗಲಿಕರಣಕ್ಕೆ  ಸಾರ್ವಜನಿಕರು ವಿರೋಧ ವ್ಯಕ್ತಪಡಿಸದೇ ತಮ್ಮ ಜಾಗವನ್ನು ಹೆದ್ದಾರಿ ಪ್ರಾಧಿಕಾರಕ್ಕೆ  ಬಿಟ್ಟುಕೊಟ್ಟು ಪರಿಹಾರವನ್ನು ಪಡೆದಿದ್ದಾರೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಕಟ್ಟಡ ಉಳಿಸಿಕೊಳ್ಳುವ ಸಲುವಾಗಿ ಈಗಿದ್ದ ಹೆದ್ದಾರಿ ಅಗಲೀಕರಣದ ಬದಲು ಬೈಪಾಸ್  ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದಾರೆ. ಕೆಲವೇ  ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಕಟ್ಟಡ ಮತ್ತು ಜಾಗ ಉಳಿಸಿಕೊಳ್ಳುವುದಕ್ಕಾಗಿ ಬೆಳೆಯುತ್ತಿರುವ ನಗರದ ಅಗಲಿಕರಣವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಮನವಿಯನ್ನು ನೀಡಿದರು.

RELATED ARTICLES  ಕಂಟೇನರ್ ಪಲ್ಟಿ : ಸ್ವಲ್ಪದರಲ್ಲಿಯೇ ತಪ್ಪಿದ ಭಾರೀ ಅನಾಹುತ.