ಭಟ್ಕಳ: ಪಟ್ಟಣದ ಇನ್ನೋರ್ವ ಯುವಕನಲ್ಲಿ ಕೋವಿಡ್-ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಭಟ್ಕಳ ಮೂಲದವರಲ್ಲಿ ಇದೀಗ ಒಟ್ಟು ಎಂಟಕ್ಕೆ (7+1) ಏರಿಕೆ ಆದಂತಾಗಿದೆ.
ಈತ ಮಂಗಳೂರಿನಿಂದ ಮಾ.20ರಂದು ಭಟ್ಕಳಕ್ಕೆ ಆಗಮಿಸಿದ್ದ ಸೋಂಕಿತ ಸಂ.35ರ ಸ್ನೇಹಿತನಾಗಿದ್ದಾನೆ. ಜಿಲ್ಲೆಯ ಮೊದಲ ಸೋಂಕಿತನಾದ ಸಂ.35ನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು, ಭಟ್ಕಳಕ್ಕೆ ಈತ ತನ್ನ ಕಾರಿನಲ್ಲಿ ಕರೆದುಕೊಂಡು ಬಂದಿದ್ದ. ಬಳಿಕ ಆತನ ಮನೆಗೂ ತೆರಳಿ ಸೋಂಕಿತ ಸಂ.35ನ್ನು ಬಿಟ್ಟು ಬಂದಿದ್ದ.
ಇದಾದ ನಂತರ ಅರ್ಧ ಗಂಟೆಯಲ್ಲೇ ಸೋಂಕಿತ ಸಂ.35 ಅನುಮಾನದ ಮೇಲೆ ಆಸ್ಪತ್ರೆಗೆ ಸೇರಿದಾಗ ಆತನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನದ ಮೇಲೆ ಈ ಸ್ನೇಹಿತನ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಈ ಸ್ನೇಹಿತನಿಗೂ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.