ಕಾರವಾರ : ಮುಂದಿನ ಶುಕ್ರವಾರದೊಳಗೆ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಆಸ್ಪತ್ರೆಯಲ್ಲಿ ಕೋವಿಡ್- 19 ಯುನಿಟ್ ಸಿದ್ಧವಾಗಲಿದ್ದು, ಇದಕ್ಕಾಗಿ ಒಂದು ಕೋಟಿ ರೂಪಾಯಿ ವೆಚ್ಚವನ್ನು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.
‘ಈ ಯೂನಿಟ್ ಕೆಲವು ಪ್ರಮುಖವಾದ ಅಂಶಗಳನ್ನು ಒಳಗೊಂಡಿದೆ. ಮೊದಲನೆಯದಾಗಿ 150 ಹಾಸಿಗೆಯ ಆಮ್ಲಜನಕ ಪೂರೈಕೆಯೊಂದಿಗೆ ಐಸೊಲೇಷನ್ ಸೆಂಟರ್ (ಐಎಸ್‌ಸಿ) ಘಟಕಗಳ ವ್ಯವಸ್ಥೆ ಮಾಡಲಾಗಿದೆ ಮತ್ತು ಐಎಸ್‌ಸಿ ಜೊತೆಗೆ 50 ಬೆಡ್ ಕ್ವಾರೆಂಟೈನ್ ವ್ಯವಸ್ಥೆಯನ್ನು ಹೊಂದಿದೆ. 25 ಹಾಸಿಗೆ ಸಂಪರ್ಕ ತಡೆಯನ್ನು ಹೊಂದಿದೆ. ಕ್ರಿಮ್ಸ್ ಆಸ್ಪತ್ರೆಯಿಂದ ಹೊರಗೆ 10 ಹಾಸಿಗೆಗಳ ಪ್ರತ್ಯೇಕ ಐಸಿಯು ಇರುತ್ತದೆ.