ಕುಮಟಾ : ಪಟ್ಟಣದಲ್ಲಿ ಕೊರೋನ ನಿಯಂತ್ರಣ ಕುರಿತಾದ ಲಾಕ್‌ಡೌನ್ ಕಾರಣದಿಂದಾಗಿ ಸಾರ್ವಜನಿಕರು ಹೊರಗೆ ಬರದಿರುವುದು ಕಂಡು ಬಂದಿರುತ್ತದೆ ದೈನಂದಿನ ಹಾಲಿನ ಪೂರೈಕಯಲ್ಲಿ ಚೇತರಿಕೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿರುವುದಿಲ್ಲ.
ದಿನಸಿ ವಸ್ತುಗಳ ಪೂರೈಕೆಯು ಪ್ರಾರಂಬಿಕ ಹಂತದಲ್ಲಿದ್ದು ಜನರಿಗೆ ತೊಂದರೆಯಾಗಿರುತ್ತದೆ ಆದರೆ ತರಕಾರಿ ಪೂರೈಕೆಯಲ್ಲಿ ಈ ದಿನ ಪುರಸಭೆಯು ಹೊಸ ಯೋಜನೆ ರೂಪಿಸಿದ್ದು ಇದರಂತೆ ವ್ಯಾಪಾರಸ್ತರು ಒಂದು ಕುಟುಂಬಕ್ಕೆ ಒಂದು ಕಿಟ್ 2೦೦.ರೂ ನಿಗಧಿಗೂಳಿಸಿರುತ್ತಾರೆ .
ಹೊಸಹೆರವಟ್ಟಾ, ಬಗ್ಗೋಣ, ನೆಲ್ಲಿಕೇರಿ, ಚಿತ್ರಿಗಿ, ವನ್ನಳ್ಳಿ, ಕೆಲ ಪ್ರದೇಶಗಳಲ್ಲಿ ತರಕಾರಿಯನ್ನು ವಿತರಿಸುವಸ್ಟರಲಿಯೆ ತರಕಾರಿ ಖಾಲಿಯಾಗಿರುವುದರಿಂದ ವ್ಯಾಪಾರಸ್ತರು ಸುಮ್ಮನೆ ಕುಳಿತುಕೊಂಡ ಪ್ರಸಂಗ ಈ ದಿನ ನಡೆದಿರುತ್ತದೆ ಸುಮಾರು 800 ತರಕಾರಿ ಕಿಟ್ ವಿತರಿಸಿದ್ದು ನಗರದಲ್ಲಿ 7500 ಕುಟುಂಬಗಳಿದ್ದು ಮುಂದಿನ ದಿನಗಳಲ್ಲಿ ಯಾವರೀತಿ ತರಕಾರಿಯನ್ನು ಸರಬರಾಜು ಮಾಡಿಕೊಳ್ಳಲಾಗುತ್ತದೆ ಎಂಬದನ್ನು ಕಾದು ನೊಡಬೇಕಾಗಿರುತ್ತದೆ ಈ ದಿನ ಸಾರ್ವಜನಿಕರಂತೆ ಮಾನ್ಯ ಶಾಸಕರು ಮನೆಯ ಮುಂಬಾಗಿಲಿನ ಗೇಟಗೆ ಬಂದು ತರಕಾರಿ ಕಿಟ್ ಅನ್ನು ತೆಗೆದುಕೊಂಡು ವ್ಯಾಪಾರಸ್ತರಿಗೆ 2೦೦.ರೂ ನೀಡಿರುವುದು ವಿಶೇಷವಾಗಿತ್ತು.