ಭಟ್ಕಳ: ಮಾರ್ಚ್ 27ರಂದು ಆಸ್ಪತ್ರೆಗೆ ಶಂಕಿತನೆಂದು ದಾಖಲಾಗಿದ್ದ ಯುವಕ ಆಸ್ಪತ್ರೆಯಿಂದ ನಿನ್ನೆ ರಾತ್ರೋರಾತ್ರಿ ಪರಾರಿಯಾದ ಘಟನೆ ವರದಿಯಾಗಿದೆ.
ಜ್ವರ ಹಾಗೂ ಘಂಟಲುನೋವು ಹೊಂದಿರುವ ಈತ ಸಂಶಯ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ.
ಆಸ್ಪತ್ರೆಯ ಸುತ್ತಮುತ್ತ ಯುವತಿಯೋರ್ವಳು ಮಾಸ್ಕ್ ಧರಿಸಿಕೊಂಡು ಓಡಾಡಿಕೊಂಡಿದ್ದಳು. ಇದೇ ಯುವತಿ ಯುವಕನಿಗೆ ಊಟ ನೀಡುವ ನೆಪದಲ್ಲಿ ವಾರ್ಡ್ ಪ್ರವೇಶಿಸಿ, ಯುವಕನನ್ನು ಕರೆದುಕೊಂಡು ಹೋಗಿರಬಹುದು ಎನ್ನಲಾಗಿದೆ.
ಪರಾರಿಯಾಗಿದ್ದ ಶಂಕಿತ ಯುವಕ ನನ್ನು ಪೊಲೀಸರು ಕೊನೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಪೊಲೀಸರು ಈತನ ಮನೆಗೆ ತೆರಳಿ ಕೌಂಸಿಲಿಂಗ್ ಮಾಡಿದ್ದು ನಂತರ ಭಟ್ಕಳ ಆಸ್ಪತ್ರೆಗೆ ಮರಳಿ ಕರೆತಂದಿದ್ದಾರೆ. ಇಡೀ ಭಟ್ಕಳದಲ್ಲಿ ಭಯ ಹುಟ್ಟಿಸಿದ್ದ ಶಂಕಿತನ ಪರಾರಿ ಪ್ರಕರಣ ಸುಖಾಂತ್ಯವಾಗಿದೆ.