ಕುಮಟಾ: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಕಾರ್ಯದಲ್ಲಿ ಬಳಕೆ ಮಾಡುವಂತೆ ಕುಮಟಾ ಎ.ಪಿ.ಎಂ.ಸಿ ವತಿಯಿಂದ ಉಪವಿಭಾಗಾಧಿಕಾರಿ ಎಂ. ಅಜಿತ್ ರೈಯವರಿಗೆ ಒಂದು ಸಾವಿರ ಮಾಸ್ಕ್ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ 15 ಲಕ್ಷ ರೂ.ಗಳ ಚೆಕ್‌ನ್ನು ಹಸ್ತಾಂತರಿಸಲಾಯಿತು.
ಎ.ಪಿ.ಎಂ.ಸಿ. ಅಧ್ಯಕ್ಷ ರಾಮನಾಥ ಶ್ರೀಧರ ಶಾನಭಾಗ ಮಾತನಾಡಿ, ಎ.ಪಿ.ಎಂ.ಸಿ. ಉಪಾಧ್ಯಕ್ಷ ರಾಮಚಂದ್ರ ವಿ.ಹೆಗಡೆ ನಂದಯ್ಯನ್, ಸದಸ್ಯ ಅರವಿಂದ ಕೆ. ಪೈ, ರಾಯೇಶ ಎಂ. ಬಾಳಗಿ, ಕಾರ್ಯದರ್ಶಿ ಎಂ.ಸಿ. ಪಡಗಾನೂರ, ಉಪವಿಭಾಗಾಧಿಕಾರಿ ಕಾರ್ಯಾಲಯ ವ್ಯವಸ್ಥಾಪಕ ವಿ.ಆರ್.ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.