ಶಿರಸಿ: ನಗರದಲ್ಲಿ ಪೆಟ್ರೋಲ್ ಖರೀದಿಗೆ ಮೀತಿ ಹೇರಲಾಗಿದ್ದು, ಪೊಲೀಸ್ ಅಥವಾ ತಾಲೂಕಾ ಆಡಳಿತದಿಂದ ಪರ್ಮಿಷನ್ ತಂದಲ್ಲಿ ಮಾತ್ರ ಪೆಟ್ರೋಲ್ ನೀಡಲಾಗುತ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಸುಳ್ಳು ಹೇಳಿದ ವ್ಯಕ್ತಿಯೊರ್ವ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ತಾಲೂಕಿನ ಹಂಚಿನಕೇರಿಯ ವ್ಯಕ್ತಿ ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ತಾಯಿಗೆ ಅನಾರೋಗ್ಯವಿದ್ದು, ಆಸ್ಪತ್ರೆಗೆ ತೆರಳಲು ೨೦ ಲೀಟರ್ ಪೆಟ್ರೋಲ್ ಅಗತ್ಯವಿದೆ ಎಂದು ಸುಳ್ಳು ಮಾಹಿತಿ ನೀಡಿ ಅನುಮತಿ ಪಡೆದುಕೊಂಡಿದ್ದನು. ಪೊಲೀಸರು ಅನುಮತಿ ನೀಡಿದ್ದ ಪತ್ರವನ್ನು ದುರುಪಯೋಗ ಪಡಿಸಿಕೊಂಡು ಪೆಟ್ರೋಲ್ ಬಂಕ್‌ನಲ್ಲಿ ದಬಾಯಿಸಿ ಪೆಟ್ರೋಲ್ ಹಾಕಿಸಿಕೊಂಡಿದ್ದಕ್ಕಾಗಿ ಪೊಲೀಸರು ಬಂಧಿಸಿ, ಕ್ರಮ ಕೈಗೊಂಡಿದ್ದಾರೆ.