ಸಿರ್ಸಿ ವೃತ್ತ ನಿರೀಕ್ಷಕರಾದ ಶ್ರೀ ಪ್ರದೀಪ ಬಿ.ಯು ಮತ್ತು ಸಿರ್ಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ಪಿ.ಎಸ್.ಐ.ರವರಾದ ಶ್ರೀ ನಾಗಪ್ಪ ರವರು ದೇಶಾದ್ಯಂತ ಲಾಕ್ ಡೌನ್ ಇರುವ ಸಮಯದಲ್ಲಿ ಇಂದು ಸಕಾರಣವಿಲ್ಲದೇ ವಾಹನದೊಂದಿಗೆ ರಸ್ತೆಗೆ ಇಳಿದ ಸವಾರ ನನ್ನು “ಕೊರೊನಾ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿದ್ದೆನೆ ನನ್ನನ್ನು ಕ್ಷಮಿಸಿ” ಎಂಬ ಭಿತ್ತಿ ಚಿತ್ರವನ್ನು ಅವರ ಕೈಯಲ್ಲಿ ನೀಡುವುದರ ಮೂಲಕ ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ಸಾರ್ವಜನಿಕರನ್ನು ನಿಯಂತ್ರಿಸಲು ವಿನೂತನ ಕ್ರಮ ಕೈಗೊಂಡಿರುತ್ತಾರೆ.