ಕುಮಟಾ : ಈ ಹಿಂದೆ ಏಳನೂರು ಜನ ಬಡ ಆಟೋ ಚಾಲಕರಿಗೆ ತಮ್ಮ ವಯುಕ್ತಿಕ ಹಣ ಕರ್ಚುಮಾಡಿ ತಲಾ ಒಂದು ಸಾವಿರದಂತೆ ಏಳು ಲಕ್ಷ ಹಣವನ್ನು ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ನೀಡುವ ಮೂಲಕ ಉದಾರತೆ ತೋರಿದ್ದ ಕುಮಟಾ ಶಾಸಕರು ಇಂದು ತರಕಾರಿಯನ್ನು ತಮ್ಮ ಮನೆಯಲ್ಲಿ ಉಚಿತವಾಗಿ ಹಂಚುವ ಮೂಲಕ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದಿನಕರ ಶೆಟ್ಟಿ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಆಗಿದೆ.. ಆರೋಗ್ಯ ದ ದೃಷ್ಟಿಯಿಂದ ಎಲ್ಲರೂ ಕೂಡ ಮನೆಯಲ್ಲಿದ್ದು ಕರೋನಾ ಮಹಾಮಾರಿ ಯನ್ನು ದೂರ ಮಾಡುವ ಹಾಗೂ ತಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳುವ ದೃಷ್ಟಿಯಿಂದ ಮನೆಯಲ್ಲಿ ಇದ್ದು ಲಾಕ್ ಡೌನ್ ಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ.. ವಾಹನಗಳು ಓಡಾಡೋದಿಲ್ಲ.. ಮಾರ್ಕೆಟ್ ಬಂದಾಗಿದೆ ಆ ಕಾರಣದಿಂದ ರೈತರು ಬೆಳೆದ ತರಕಾರಿ ಕೆಟ್ಟು ಹೋಗುತ್ತಿದೆ..
ಗೋಕರ್ಣ ದ ತರಕಾರಿ ಪ್ರಸಿದ್ಧ.. ಗೋಕರ್ಣ ದ ಮೆಣಸು ಎಲ್ಲರೂ ಇಷ್ಟ ಪಡುತ್ತಾರೆ.. ಆದ್ದರಿಂದ ನಾನು ಅಲ್ಲಿಯ ಒಂದು ಲೋಡ್ ರೈತರು ಬೆಳೆದ ತರಕಾರಿ ತರಸಿಕೊಂಡು ಕುಮಟಾ ನಗರ ವ್ಯಾಪ್ತಿಯಲ್ಲಿ ಉಚಿತವಾಗಿ ವಿತರಿಸುವ ಕೆಲಸ ಮಾಡಿದ್ದೇನೆ.. ಕ್ಷೇತ್ರದ ಎಲ್ಲ ಕಡೆ ವಿತರಿಸುವುದು ಕಷ್ಟ.. .ಕೆಲವು ಕಡೆ ಮಾತ್ರ ವಿತರಿಸಬಹುದು.. ಯಾರೂ ಅನ್ಯಥಾ ಭಾವಿಸಬೇಡಿ.. ನಮ್ಮ ಕ್ಷೇತ್ರದ ರೈತರ ಬೆಳೆ ಹಾಳಾಗಬಾರದು ಎನ್ನುವ ದೃಷ್ಟಿಯಿಂದ ಅವರಲ್ಲಿ ಲಭ್ಯ ಇದ್ದಷ್ಟು ಖರೀದಿಸಿ ವಿತರಿಸುವ ಕೆಲಸ ಮಾಡಿದ್ದೇನೆ… ಇನ್ನೂ ಒಂದೆರಡು ಲೋಡ್ ಬರಬಹುದು.. ಕೆಲವು ಕಡೆ ವಿತರಿಸುವ ಕೆಲಸ ಮಾಡುತ್ತೇನೆ
ಲಾಕ್ ಡೌನ್ ಸಮಯದಲ್ಲಿ ನಮ್ಮ ಕ್ಷೇತ್ರದ ಜನರಿಗೆ ಯಾವುದೇ ಸಮಸ್ಯೆ ಆದರೂ ಕೂಡ ನೀವು ಸಂಪರ್ಕಿಸಬಹುದು… ದಯವಿಟ್ಟು ಇನ್ನು ಕೆಲವು ದಿನ ಮನೆಯಲ್ಲಿಯೇ ಇರಿ.. ಆರೋಗ್ಯ ಮುಖ್ಯ… ಮುಂದಿನ ಸಂತೋಷದ ಜೀವನಕ್ಕಾಗಿ ಸ್ವಲ್ಪ ಕಷ್ಟ ಪಡಬೇಕಾಗಿದೆ ಎಂದರು.
ಕುಮಟಾ ಪಟ್ಟಣದಲ್ಲಿ ಕೊರೋನ ನಿಯಂತ್ರಣ ಕುರಿತಾದ ಲಾಕ್‌ಡೌನ್ ಕಾರಣದಿಂದಾಗಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳದೇ ಮನೆಯಲ್ಲೇ ಇರುವ ಮೂಲಕ ಸಹಕಾರ ನೀಡಿದ್ದಾರೆ.
ಕುಮಟಾ ಪುರಸಭೆಯ ಕಾಳಜಿಯಿಂದ ದೈನಂದಿನ ಹಾಲಿನ ಪೂರೈಕಯಲ್ಲಿ ವ್ಯತ್ಯಯವಾಗದೇ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಯಿತು.
ದಿನಸಿ ವಸ್ತುಗಳ ಪೂರೈಕೆಯು ಪ್ರಾರಂಭಿಕ ಹಂತದಲ್ಲಿದ್ದು ಜನರಿಗೆ ಒಂದಿಷ್ಟು ತೊಂದರೆಗಳಾಗಿದ್ದವು.
ಆದರೆ ತರಕಾರಿ ಪೂರೈಕೆಯಲ್ಲಿ ಪುರಸಭೆಯು ಹೊಸ ಯೋಜನೆ ರೂಪಿಸಿದ್ದು ಇದರಂತೆ ವ್ಯಾಪಾರಸ್ತರು ಒಂದು ಕುಟುಂಬಕ್ಕೆ ಒಂದು ಕಿಟ್ 2೦೦.ರೂ ನಿಗಧಿಗೂಳಿಸುವ ಮೂಲಕ ಸರಗವರಿಗೂ ಸಮಾನ ಪಾಲು ಕೊಡಿಸುವ ಪ್ರಯತ್ನವನ್ನು ಪುರಸಭೆ ಮಾಡಿದೆ.
ಹೊಸಹೆರವಟ್ಟಾ, ಬಗ್ಗೋಣ, ನೆಲ್ಲಿಕೇರಿ, ಚಿತ್ರಿಗಿ, ವನ್ನಳ್ಳಿ, ಕೆಲ ಪ್ರದೇಶಗಳಲ್ಲಿ ತರಕಾರಿಯನ್ನು ವಿತರಿಸುವಸ್ಟರಲ್ಲಿಯೇ ತರಕಾರಿ ಖಾಲಿಯಾಗಿರುವುದರಿಂದ ವ್ಯಾಪಾರಸ್ತರು ಮಾಲಿಲ್ಲದೆ ಗ್ರಾಹಕರಿಗೆ ಬರಿಗೈ ತೋರಿಸುವಂತಾಗಿತ್ತು.
ಆದರೇ ಪುರಸಭೆ ತರಕಾರಿ ಕಿಟ್ ಕಾರ್ಯರೂಪಕ್ಕೆ ತಂದಿದ್ದು ಸುಮಾರು 800 ತರಕಾರಿ ಕಿಟ್ ವಿತರಿಸಿದ್ದು ನಗರದಲ್ಲಿ 7500 ಕುಟುಂಬಗಳಿದ್ದು ಮುಂದಿನ ದಿನಗಳಲ್ಲಿ ಈ ಕಿಟ್ ಎಲ್ಲರಿಗೂ ಸಿಗಲು ಅನುಕೂಲ ಮಾಡಿಕೊಡಲಿದೆ.
ಶಾಸಕ ದಿನಕರ್ ಶಟ್ಟಿ ಮನೆಯಲ್ಲಿ ಉಚಿತ ತರಕಾರಿ ವಿತರಣೆ.