ಸಿದ್ದಾಪುರ: ನಗರದಲ್ಲಿ ಸ್ವತಃ ಡ್ರೋಣ್ ಹಾರಿಸುವ ಮೂಲಕ ಲಾಕ್ ಡೌನ್ ನಿಯಮ ಪಾಲನೆಯ ಕುರಿತು ಪರಿಶೀಲನೆ ನಡೆಸುತ್ತಿರುವ ಡಿ.ವೈ.ಎಸ್.ಪಿ
ಜಿ.ಟಿ.ನಾಯಕ್ ಈ ಸಂದರ್ಭದಲ್ಲಿ ಸಿದ್ಧಾಪುರ ಸಿ.ಪಿ.ಐ ಪ್ರಕಾಶ್ ಹಾಗೂ ಪೋಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈಗಾಗಲೇ ಶಿರಸಿ ಸಹಿತ ಎಲ್ಲಾ ಕಡೆಯೂ ಲಾಕ್ ಡೌನ್ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುತ್ತಿರುವ ಜೊತೆಯಲ್ಲಿ ಜನ ಸಾಮಾನ್ಯರಿಗೂ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವ ಮೂಲಕ ಶಿರಸಿ ಉಪ ವಿಭಾಗದ ಪೋಲೀಸರು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗುತ್ತಿದ್ದಾರೆ.
ನಂತರ ಡ್ರೋಣ್ ಕಾರ್ಯಾಚರಣೆ ಹಾಗೂ ಲಾಕ್ ಡೌನ್ ಪಾಲನೆ ಕುರಿತಂತೆ ಡಿ.ವೈ.ಎಸ್.ಪಿ ಜಿ ಟಿ ನಾಯಕ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.