ಭಟ್ಕಳ: ಭಟ್ಕಳದಲ್ಲಿ ಮತ್ತೆ ಒಬ್ಬರಿಗೆ ಕರೋನಾ ಸೋಂಕು ದೃಡಪಟ್ಟಿದ್ದು ಮತ್ತೆ ಉತ್ತರ ಕನ್ನಡಿಗರಿಗೆ ಕೋವಿಡ್-19 ನ ಭಯ ಹೆಚ್ಚಿದೆ.ಭಟ್ಕಳ ಮೂಲದ ಒಟ್ಟು ಒಂಬತ್ತು ಮಂದಿಯಲ್ಲಿ ಕೋವಿಡ್- 19 ಸೋಂಕು ಇರುವುದು ದೃಢಪಟ್ಟಿದೆ.
ಸೋಂಕಿತ ಸಂಖ್ಯೆ 62ರ ಈ ಮೊದಲು ದೃಢಪಟ್ಟಿದ್ದ ಭಟ್ಕಳ ಮೂಲದ 22 ವರ್ಷದ ಸೋಂಕಿತ ಯುವಕನ ಜೊತೆ ದುಬೈನಿಂದ ಪಟ್ಟಣಕ್ಕೆ ಬಂದಿದ್ದ ಇನ್ನೋರ್ವ ಯುವಕನಲ್ಲೂ ಕೋವಿಡ್- 19 ಇರುವುದು ಇಂದು ದೃಢಪಟ್ಟಿದೆ.
ಈತ ದುಬೈನಿಂದ 20ರಂದು ಸೋಂಕಿತ ಸಹೋದರನೊಂದಿಗೆ ಗೋವಾ ದಾಬೋಲಿಯಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅದರ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.