ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಚಿದಾನಂದ ಭಂಡಾರಿವರು ಬಹುಮುಖ ಪ್ರತಿಭೆಯುಳ್ಳವರು.ಯಕ್ಷಗಾನ ಕಲಾವಿದರಾಗಿ ತಾಳಮದ್ದಳೆಯ ಅರ್ಥಧಾರಿಗಳಾಗಿ ರಾಜ್ಯಮಟ್ಟದಲ್ಲಿ ಸ್ಥಾನಗಳಿಸಿದ ಭಾಷಣಕಾರರಾಗಿ ಉತ್ತಮಸಂಘಟರಾಗಿ ಜಿಲ್ಲೆಯ ಜನತೆಗೆ ಪರಿಚಿತರಾಗಿದ್ದಾರೆ.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಕಾರ್ಯದರ್ಶಿಗಳಾಗಿರುವ ಇವರು ಇದುವರೆಗೆ ಅನೇಕ ಚುಟುಕುಗಳನ್ನು ವ್ಯಕ್ತಿಪರಿಚಯಗಳನ್ನು ಕಥೆ ಕವನಗಳನ್ನು ರಚಿಸಿರುತ್ತಾರೆ.ಇವರ ಹಲವಾರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.ಸಮಾಜದ ವಾಸ್ತವ ಸಂಗತಿಗಳನ್ನು ಮುಖಕ್ಕೆ ರಾಚುವಂತೆ ಹೇಳುವುದು ಇವರ ಶೈಲಿಯಾಗಿದೆ.ನಮ್ಮ ಸತ್ವಾಧಾರ ನ್ಯೂಸ್ ನ ನಿರಂತರ ಬರಹಗಾರರಾದ ಇವರು ಬರೆದ ಶ್ರೀಮಂತ ದೇಶದ ಬಡವನ ಕಥೆ ಎಂಬ ಲೇಖನವು ಅತೀ ಕಡಿಮೆ ಅವಧಿಯಲ್ಲಿ ಹೆಚ್ಚಿನ ಓದುಗರನ್ನು ಸಂಪಾದಿಸಿ ಹೆಸರುಗಳಿಸಿದೆ ಅಲ್ಲದೇ ಅತೀ ಹೆಚ್ಚುಬಾರಿ ಪ್ರಸರಣಗೊಂಡು ರಾಜ್ಯವ್ಯಾಪಿ ಹರಿದಾಡಿದೆ ಪ್ರಸ್ತುತ ಬಿ ಪಿ ಎಲ್ ಕಾರ್ಡ ಹಂಚಿಕೆಯಲ್ಲಿ ಆಗುತ್ತಿರುವ ಲೋಪವನ್ನು ಪುನರ್ ಪರಿಶೀಲಿಸುವ ನಿಟ್ಟಿನಲ್ಲಿ ಈ ಕಥೆಯು ಚರ್ಚೆಗೊಳಪಡುತಿದೆ.ಅನೇಕರು ಸತ್ವಾಧಾರ ವಾಹಿನಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುತ್ತಾರೆ.
ನಮ್ಮ ಅಂತರ್ಜಾಲ ಪತ್ರಿಕೆಯ ವರದಿಯ ದೆಸೆಯಿಂದಾಗಿ ಸಮಾಜಮುಖಿ ಚಿಂತನೆ ಹಾಗೂ ತನ್ಮೂಲಕ ಪರಿವರ್ತಗೆ ಆಗುವಂತಾದರೆ ಅದಕ್ಕಿಂತಲೂ ಸಂತಸದ ಮತ್ತು ಹೆಮ್ಮೆಯ ವಿಷಯ ಬೇರೊಂದಿಲ್ಲ.ಸತ್ವಾಧಾರ ನ್ಯೂಸ್ ನ ಓದುಗ ಬಳಗವು ನೀಡು ಸಲಹೆ ಮಾರ್ಗದರ್ಶನವನ್ನು ಸದಾ ಸ್ವೀಕರಿಸಲು ಮುಕ್ತಮನಸ್ಸನ್ನು ಹೊಂದಿದ್ದೇವೆ.
ಅರ್ಥಪೂರ್ಣ ಲೇಖನಕ್ಕಾಗಿ ಚಿದಾನಂದ ಭಂಡಾರಿಯವರಿಗೆ ಹಾಗೂ ಓದಿ ಪ್ರತಿಕ್ರಿಯೆ ನೀಡಿದ ಹಾಗೂ ನೀಡುತ್ತಿರುವ ಓದುಗ ಬಂಧುಗಳಿಗೆ ಸತ್ವಾಧಾರ ಬಳಗದಿಂದ ಧನ್ಯವಾದಗಳು.
ಗಣೇಶ ಜೋಶಿ ಸಂಕೊಳ್ಳಿ
ಸಂಪಾದಕರು.