ಕುಮಟಾ: ತಾಲೂಕಿನ ಸಂತೆಗುಳಿಯ ಅಘನಾಶಿನಿ ನದಿಯಲ್ಲಿ ಸ್ಪೋಟಕ ವಸ್ತುಗಳನ್ನು ಉಪಯೋಗಿಸಿ ಮೀನು ಹಿಡಿಯುವಾಗ ಸ್ಪೋಟಕ ಸ್ಪೋಟಗೊಂಡು ವ್ಯಕ್ತಿಯ ಕೈ ಕಾಲುಗಳಿಗೆ ಗಾಯವಾದ ಘಟನೆ ನಡೆದಿದೆ.
ಸೆಂತೆಗುಳಿ ನಿವಾಸಿಯಾದ ಬುಡಾನ ಗಫಾರ್ ಶೇಖ್, ಮೊಹಮ್ಮದ್ ಆಸಾದ, ಬುಡಾನ್ ಶೇಖ್ ಅಣ್ಣಪ್ಪಾ ಧಾಕು ಮರಾಠಿ ಬಂಗಣೆ ನಿವಾಸಿ ಇವರು ಅಘನಾಶಿನಿ ನದಿಯಲ್ಲಿ ಸ್ಪೋಟಕ ಸಾಮಾಗ್ರಿಗಳನ್ನು ಬಳಸಿ ಮೀನು ಹಿಡಿಯುವ ಸಂದರ್ಭದಲ್ಲಿ ಸ್ಪೋಟಗೊಂಡು ಮೂವರಿಗು ಗಂಭೀರವಾಗಿ ಗಾಯಗೊಂಡು ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಿದ್ದಾರೆ
ಈ ಕುರಿತು ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.