ಕುಮಟಾ : ಈಗಾಗಲೇ ರಾಜ್ಯದಲ್ಲಿ ಕೋವಿಡ್ 19 ಕಾಯಿಲೆಯ ಪ್ರಕರಣ ಹೆಚ್ಚಾಗುತ್ತಿದ್ದು ಜಿಲ್ಲೆಯ ಭಟ್ಕಳದಲ್ಲಿ 8ಪ್ರಕರಣ ಗಳು ದಾಖಲಾಗಿವೆ. ಹೀಗಾಗಿ ಏ 14 ರವರೆಗೆ ಲಾಕಡೌನ್ ಇರುವುದರಿಂದ ಯಾರು ಕೂಡ ಮನೆಯಿಂದ ಹೊರ ಬರಬಾರದು ಎಂದು ಕಟ್ಟು ನಿಟ್ಟಾಗಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರೂ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡು ಬರುತ್ತಿದೆ. ವಾಹನ ಸವಾರರು ಬೇಕಾಬಿಟ್ಟಿ ಸುಖಾ ಸುಮ್ಮನೆ ಅಡ್ಡಾಡುತ್ತಿದ್ದಾರೆ. ಅವಶ್ಯಕ ಸಾಮಗ್ರಿ ಊರಲ್ಲೇ ದೊರೆಯುತ್ತಿದ್ದರೂ ವಿನಾ: ಕಾರಣ ವಾಹನಗಳಲ್ಲಿ ಓಡಾಡುತ್ತಿರುವುದು ತಾಲೂಕು ಆಡಳಿತದ ಗಮನಕ್ಕೆ ಬಂದಿದೆ. ಹೀಗಾಗಿ ವಾಹನಗಳನ್ನು ಜಪ್ತಿ ಮಾಡಿ ಸಿಜ್ ಮಾಡಲು ಕುಮಟಾ ಸಿ ಪಿ ಆಯ್ ಅವರಿಗೆ ಸೂಚಿಸಲಾಗಿದೆ.ಕಾರಣ ವಾಹನ ಸವಾರರು ಜಾಗ್ರತೆ ವಹಿಸಬೇಕು ಅಲ್ಲದೆ ವ್ಯಾಪಾರಿಗಳು ನಿಗದಿತ ಬೆಲೆಯಲ್ಲಿ ಸಾಮಾನುಗಳನ್ನು ಗ್ರಾಹಕರಿಗೆ ವಿತರಸಬೇಕು.

RELATED ARTICLES  ವೈಶಿಷ್ಟ ಆಚರಣೆಗಳನ್ನು ಒಳಗೊಂಡ ಕಳಸ ಕುಟುಂಬದ ಸುಗ್ಗಿ ಕುಣಿತ

ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಕುರಿತು ದೂರು ಬಂದಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಹೊರ ಊರು, ರಾಜ್ಯಗಳಿಂದ ಊರಿಗೆ ಬಂದವರು ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಯಾವುದೇ ಕಾರಣಕ್ಕೂ ಹೊರಗಡೆ ಬರಬಾರದು ಇಂತವರು ಕಂಡು ಬಂದಲ್ಲಿ ಸರ್ಕಾರಿ ಕ್ವಾರಂಟೈನ್ ನಲ್ಲಿರಿಸಲಾಗುವುದು. ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಯಾವುದೇ ರೀತಿಯ ಮಾಹಿತಿಗಾಗಿ ನಿಮ್ಮ ಮನೆಗಳಿಗೆ ಬಂದಾಗ ಸಮರ್ಪಕ ಮಾಹಿತಿ ನೀಡಿ ಸಹಕಾರ ನೀಡ ಬೇಕು. ತಪ್ಪಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಪ್ರಕರಣ ದಾಖಲಿಸಲಾಗುವುದು. ದಯವಿಟ್ಟು ಮನೆಯಲ್ಲೇ ಇರಿ ನಿಮ್ಮ. ನಿಮ್ಮವರ ಸಮಾಜದ ಹಿತ ದ್ರಷ್ಠಿಯಿಂದ ತಾಲೂಕು ಆಡಳಿಕ್ಕೆ ಸಹಕಾರ ನೀಡುವ ಮೂಲಕ ಕೊರೋನಾ ಮಹಾಮಾರಿ ದೇಶದಿಂದಲೇ ಓದ್ದೋಡಿಸಲು ಸಹಕರಿಸೋಣ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಪವಿಭಾಗಾಧಿಕಾರಿಗಳಾದ ಎಂ ಅಜಿತ್ ತಿಳಿಸಿದ್ದಾರೆ.

RELATED ARTICLES  “ಸರಸ್ವತಿ ಪದವಿ ಪೂರ್ವ ವಿದ್ಯಾಲಯದಲ್ಲಿ ಗೊಂಬೆಯಾಟ ಪ್ರಾತ್ಯಕ್ಷಿಕೆ.”