ಹೊನ್ನಾವರ : ಗರ್ಭಿಣಿ ಮಹಿಳೆಯಾಗಿದ್ದ ವಿದ್ಯಾ ನಾಯ್ಕ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದು ಇದು ವೈದ್ಯರ ನಿರ್ಲಕ್ಷ್ಯ ಎಂದು ಮಹಿಳೆಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗರ್ಭಿಣಿಯಾಗಿದ್ದ ವಿದ್ಯಾ ನಾಯ್ಕಳನ್ನು ನಿನ್ನೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆಯವರೆಗೆ ಆಕೆಗೆ ಯಾವುದೆ ಸಮಸ್ಯೆ ಇಲ್ಲ. ಎಂದು ವೈದ್ಯರು ಆಕೆಯ ಮನೆಯವರಿಗೆ ತಿಳಿಸಿದ್ದರು ಎನ್ನಲಾಗಿದೆ. ಬಳಿಕ ಇಂದು ಆಕೆಯನ್ನ ಸರಕಾರಿ ಆಸ್ಪತ್ರೆಯಿಂದ ಹೊನ್ನಾವರ ಸಮೀಪದ ಕರ್ಕಿ ಯ ಶಾರದಾ ನರ್ಸಿಂಗ್ ಹೋಂ ಗೆ ದಾಖಲಿಸಲಾಗಿತ್ತು. ಕೊನೆಗಳಿಗೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಹೊನ್ನಾವರದ ಸರಕಾರಿ ಆಸ್ಪತ್ರೆಯ ವೈದ್ಯರು ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿ ಮಗು ತೆಗೆಯಬೇಕು ಎಂದು ಹೇಳಿರುವುದರಿಂದ ಆಕೆಯ ಕುಟುಂಬಸ್ಥರು ಒಪ್ಪಿಗೆಯನ್ನ ನೀಡಿದ್ದರು ನಂತರ ಅಪರೇಶನ್ ಮಾಡುವ ವೇಳೆ ಮಹಿಳೆ ಸಾವನ್ನಪ್ಪಿದ್ದು ಮಗು ಸುರಕ್ಷಿತವಾಗಿದ್ದಾಳೆ.
ಮಹಿಳೆ ಸಾವನ್ನಪ್ಪಿರುವ ಬಗ್ಗೆ ಆಕೆಯ ಕುಟುಂಬಸ್ಥರು ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಇಬ್ಬರೂ ವೈದ್ಯರ ಮೇಲೆ ದೂರು ದಾಖಲಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.