ಶಿರಸಿ : ತಾಲೂಕಿನ ಗಣೇಶನಗರದ ಕೆಲವು ಬಡ ಕುಟುಂಬಗಳಿಗೆ ಎಂ.ಆರ್.ಬ್ರದರ್ಸ್ ನ ಅಧ್ಯಕ್ಷರಾದ ಪೈಯ್ಯು ಚೌಟಿಯವರು ಅಕ್ಕಿ, ಬೇಳೆ ,ಸಕ್ಕರೆ ಚಹಾಪುಡಿ, ಸೋಪ್ ,ಪೇಸ್ಟ್ , ಹಣ್ಣುಗಳು ಒಳಗೊಂಡ ಅಗತ್ಯ ವಸ್ತುಗಳನ್ನು ಅವರ ಮನೆಗೆ ತೆರಳಿ ವಿತರಿಸಿದರು.
ಈ ಸಂದರ್ಭದಲ್ಲಿ ಎಂ ಆರ್ ಬ್ರದರ್ಸ್ ನ ಸೋನು, ಪ್ರದೀಪ್ ಪವಾರ್, ಅಮನ್ ಉಪಸ್ಥಿತರಿದ್ದರು.
ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಪ್ರತಿ ನಿತ್ಯವೂ ಎಂ ಆರ್ ಬ್ರದರ್ಸ್ ಶಿರಸಿ ನಗರದಲ್ಲಿ ಕರ್ತವ್ಯ ನಿರ್ವಹಿಸುವ ಪೋಲಿಸರು ,ಆಶಾ ಕಾರ್ಯಕರ್ತೆಯರು ವೈದ್ಯಕೀಯ ಸಿಬ್ಬಂದಿಗಳು, ಪೌರ ಕಾರ್ಮಿಕರಿಗೆ ನೀರು ತಂಪು ಪಾನೀಯ ಹಣ್ಣು ವಿತರಿಸುತ್ತಿದ್ದಾರೆ.ಹಾಗೂ ತಮ್ಮ ಎಂ,ಆರ್,ಬ್ರದರ್ಸ್ ಸಂಘಟನೆಯ ಮೂಲಕ ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ.