ಅಂಕೋಲಾ: ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಆದರೂ ಕೆಲವರು ಮನೆ ಬಿಟ್ಟು ಹೊರ ಬರುತ್ತಿದ್ದಾರೆ. ತಾಲೂಕಿನ ಕಂಚಿನಬಾಗಿಲು ಬಳಿ ಮನೆಯಿಂದ ಹೊರಬಂದು ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಲಾಕ್ ಡೌನ್ ವೇಳೆ ರಸ್ತೆಗೆ ಅನವಶ್ಯಕವಾಗಿ ಬರದೇ ಮನೆಯಲ್ಲಿಯೇ ಇದ್ದಿದ್ದರೇ ಇಬ್ಬರ ಪ್ರಾಣವೂ ಉಳಿಯುತ್ತಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಬಡಗೇರಿ ಗ್ರಾಮದ ಮೂವತ್ತು ವರ್ಷದ ನಾಗರಾಜ್ ಲಕ್ಷ್ಮಣ್ ಗೌಡ ಹಾಗೂ ಇಪ್ಪತ್ತೊಂಬತ್ತು ವರ್ಷದ ಬಾಳಾ ಮಾನು ಗೌಡ ಮೃತರಾಗಿದ್ದಾರೆ.