ಭಟ್ಕಳ: ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಭಟ್ಕಳದ ಮೂಲದ ಕರೋನಾ ಸೋಂಕಿತ ಗುಣ ಮುಖವಾಗಿದ್ದು ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ ಮಂಗಳೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ
ಭಟ್ಕಳ ಮೂಲದ 22 ವರ್ಷದ ಯುವಕನಾಗಿದ್ದ ಈತ ಮಾರ್ಚ್ ೧೯ ರ ವಿಮಾನದಲ್ಲಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು .ಆತನಿಗೆ ಜ್ವರದ ಲಕ್ಷಣ ಕಂಡುಬಂದಿದ್ದರಿಂದ ವಿಮಾನ ನಿಲ್ದಾಣದಿಂದ ಈತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಮಾರ್ಚ್ 22 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಈ ಯುವಕನಲ್ಲಿ ಪತ್ತೆ ಯಾಗಿತ್ತು .ನಂತರ ಯುವಕನಿಗೆ ವೆನ್ಲಾಕ್ ಆಸ್ಪತ್ರೆ ಐಸೋಲೇಷನ್ ಚಿಕಿತ್ಸೆ ಮುಂದುವರೆಸಿದ್ದು .ಏಪ್ರಿಲ್ 2 ಮತ್ತು 3 ರಂದು ಪುನಃ ಈತನ ಗಂಟಲವು ದ್ರವ್ಯ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದಾಗ ವರದಿ ನೆಗೆಟಿವ್ ಬಂದಿರುವ ಕಾರಣ ಭಟ್ಕಳ ಮುಲದ ವ್ಯಕ್ತಿಯನ್ನು ನಾಳೆ ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ದಾರೆ.