ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆ ಈ ಬಗ್ಗೆ ಅವರ ಪುತ್ರ ರಕ್ಷಕ್ ಸ್ಪಷ್ಟನೆ ಕೊಟ್ಟಿದ್ದಾರೆ. ಅಪ್ಪ ಆರೋಗ್ಯವಾಗಿದ್ದಾರೆ, ನಮ್ಮಪ್ಪ ಆಗಲೂ ಬುಲೆಟ್, ಈಗಲೂ ಬುಲೆಟ್, ಅವ್ರಿಗೆ ಏನೂ ಆಗಿಲ್ಲ ಅಂತ ತಿಳಿಸಿದ್ದಾರೆ.
ನನ್ನ ತಂದೆ ನನ್ನ ಜೊತೆಗೆ ಮಾತನಾಡುತ್ತಿದ್ದಾರೆ, ಅಪ್ಪನಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಾಗಿತ್ತು, ಅದಕ್ಕಾಗಿ ಚಿಕಿತ್ಸೆ ತೆಗೆದುಕೊಂಡಿದ್ದಾರೆ, ಅವರು ಆಗಲೂ ಬುಲೆಟ್, ಈಗಲೂ ಬುಲೆಟ್, ಹಾಗೇನಾದರೂ ಪರಿಸ್ಥಿತಿ ಗಂಭೀರವಾದರೆ ನಾವೇ ತಿಳಿಸುತ್ತೇವೆ, ಸದ್ಯಕ್ಕೆ ಆಸ್ಪತ್ರೆಯಲ್ಲಿ ಕುಟುಂಬದವರಿದ್ದೇವೆ ಅಂತ ಮಾಹಿತಿ ನೀಡಿದ್ದಾರೆ.
ಸದ್ಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋ ಬುಲೆಟ್ ಪ್ರಕಾಶ್ ಅವರು ಕಿಡ್ನಿ ವೈಫಲ್ಯದಿಂದ ಬಳಲ್ತಿದ್ದು ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಅಂತ ಹೇಳಲಾಗಿತ್ತು. ಆದ್ರೆ ಈ ಸುದ್ದಿಯನ್ನ ಬುಲೆಟ್ ಪ್ರಕಾಶ್ ಕುಟುಂಬ ಅಲ್ಲಗಳೆದಿದೆ.
Source: First News