ಚಿತ್ರದುರ್ಗ  : ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಗೌರಸಮುದ್ರ ದೇವಿಯ ಮಹಿಮೆ ಅಪಾರ. ಜನರ ಇಷ್ಟಾರ್ಥಗಳನ್ನು ಈಡೇರಿಸುವ ಭಾಗ್ಯದೇವತೆ ಈಕೆ. ಕೃಷಿಯ ದೇವತೆ ಎಂದೇ ಭಕ್ತಾದಿಗಳಿಂದ ಕರೆಸಿಕೊಂಡಿರುವ ಈ ದೇವತೆಗೆ ಕರ್ನಾಟಕ ಮಾತ್ರವಲ್ಲ ಆಂಧ್ರಪ್ರದೇಶ, ತಮಿಳುನಾಡಿದ ನಾನಾ ಭಾಗಗಳಲ್ಲಿ ಭಕ್ತಾದಿಗಳಿದ್ದಾರೆ.

RELATED ARTICLES  ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಕೋ. ಚೆನ್ನಬಸಪ್ಪ ಇನ್ನಿಲ್ಲ.

 

ಕೃಷಿಕರು ತಾವು ಬೆಳೆದ ಈರುಳ್ಳಿಯನ್ನು ಈ ಜಾತ್ರೆ ಸಂದರ್ಭದಲ್ಲಿ ತೂರುವುದು ವಿಶೇಷ. ಜೊತೆಗೆ ಕೋಳಿ, ಕುರಿ ಮರಿಗಳನ್ನು ದೇವಿಯ ಮೆರವಣಿ ಸಂದರ್ಭದಲ್ಲಿ ತೂರಲಾಗುತ್ತದೆ. ತೂರಿದ ಈರುಳ್ಳಿ, ಕೋಳಿ ಮರಿ ಸಿಕ್ಕವರು ಅದೃಷ್ಠವಂತರು ಎಂಬ ನಂಬಿಕೆ ಜೀವಂತ. ಈರುಳ್ಳಿ ತೂರುವುದರಿಂದ ಉತ್ತಮ ಫಸಲು ಹೊಲದಲ್ಲಿ ಬರುತ್ತದೆ. ಕೋಳಿ, ಕುರಿಗಳು ಸಿಕ್ಕವರು ಅವುಗಳನ್ನು ಸಾಕಿ ಮತ್ತೆ ಬರುವ ವರ್ಷದ ಜಾತ್ರೆಗೆ ಬಂದು ಅವುಗಳ ಮರಿಗಳನ್ನು ತೂರುವ ಪದ್ಧತಿ ಇಲ್ಲಿದೆ.

RELATED ARTICLES  ವರನನ್ನು ಆಕೆ ಚಿನ್ನವೇ ತನಗೆ ಬೇಡ ಎಂದು, ವರನನ್ನು ಬಹುಮಾನವಾಗಿ ಕೇಳಿದ್ದೇನು ಗೊತ್ತಾ..?