ಶಿರಸಿ : ತಾಲೂಕಿನ ಕೆಲವುಕಡೆ ಸುಮಾರು ಎರಡು ತಾಸುಗಳ ಕಾಲ ದಾಸನಕೊಪ್ಪ, ಬದನಗೋಡು, ದನಗನಹಳ್ಳಿ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದು ಇಳೆಗೆ ತಂಪೆರೆದಿದೆ.
ಮಳೆಯ ಸಂದರ್ಭದಲ್ಲಿ ತಾಲ್ಲೂಕಿನ ಬದನಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಎರಡು ತೆಂಗಿನ ಮರಗಳು ಹೊತ್ತಿ ಉರಿದ ಘಟನೆ ನಡೆದಿದೆ. ಹೆಚ್ಚಿನ ಅವಘಡ ಸಂಭವಿಸಿದ ವರದಿಗಳಾಗಿಲ್ಲ.