ಕಾರವಾರ :- ಇಂದು ಜಿಲ್ಲಾಧಿಕಾರಿಯವರ ಕಚೇರಿಯ ಸಭಾಭವನದಿಂದ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮುಸ್ಲಿಮ್ ಸಮುದಾಯದ ಮುಖಂಡರೊಂದಿಗೆ ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಸಮಾಲೋಚನೆ ನಡೆಸಲಾಯಿತು.
ದಿನಾಂಕ: 10-04-2020ರಂದು ಮುಸ್ಲಿಮ್ ಸಮುದಾಯದವರು ಆಚರಿಸುವ ಷಬ್-ಎ-ಬರಾತ್ ಹಬ್ಬವನ್ನು ಕೋವಿಡ್ -19 ವೈರಸ್ ಸಾಂಕ್ರಾಮಿಕ ರೋಗದ ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿಗಳಲ್ಲಿ ಸಾಮೂಹಿಕವಾಗಿ ಆಚರಿಸದೇ ತಮ್ಮ ತಮ್ಮ ಮನೆಯಲ್ಲಿಯೇ ಆಚರಿಸುವಂತೆ ಸೂಚಿಸಲಾಯಿತು.
ದೆಹಲಿ ತಬ್ಲಿಕ್ ಸಮಾವೇಶದಲ್ಲಿ ಭಾಗವಹಿಸಿರುವ ಸಮುದಾಯದವರು ಯಾರಾದರೂ ಇದ್ದಲ್ಲಿ, ಅವರ ಮಾಹಿತಿ ಯನ್ನು ಪೊಲೀಸ್ ಇಲಾಖೆಗೆ, ಆರೋಗ್ಯ ಇಲಾಖೆ ಮತ್ತು ಜಿಲ್ಲಾಢಳಿತಕ್ಕೆ ನೀಡುವಂತೆ ಸೂಚಿಸಲಾಯಿತು.
ಸಾಮಾಜಿಕ ಮಾಧ್ಯಮದಲ್ಲಿ (ಸೋಸಿಯಲ್ ಮಿಡಿಯ)ಕೋಮು ಪ್ರಚೋದನಾತ್ಮಕ ವಿಷಯಗಳನ್ನು ಪ್ರಸ್ತಾಪಿಸದಂತೆ/ಹಂಚಿಕೊಳ್ಳದಂತೆ ಸೂಚಿಸಲಾಯಿತು.