ಹೊನ್ನಾವರ : ತಾಲೂಕಿನ ಅಗ್ರಹಾರದ ಚಿಪ್ಪಿಹಕ್ಕಲ ಕ್ರಾಸ್ ಬಳಿಯ ಗೀತಾ ಕೊಲ್ಡ್ರಿಂಕ್ಸ್ ಅಂಗಡಿಯಲ್ಲಿ ಹಾಲು, ಮೊಸರು, ಮಜ್ಜಿಗೆ ಪ್ಯಾಕೆಟ್ ಗಳನ್ನು ಕಳ್ಳತನ ನಡೆದಿದೆ.

ಸುಮಾರು 30 ರಿಂದ 35 ವರ್ಷ ವಯಸ್ಸಿನ ವ್ಯಕ್ತಿ ಬೆಳಗಿನ ಜಾವ ೪ ಗಂಟೆಗೆ ಬಂದು ಅಂಗಡಿ ಎದುರು ಇಳಿಸಿಟ್ಟಿದ್ದ ಹಾಲು, ಮೊಸರು, ಮಜ್ಜಿಗೆ ಪ್ಯಾಕೆಟ್ ಗಳನ್ನು ಕಳ್ಳತನ ನಡೆಸಿರುವುದು ಸಿಸಿ ಕ್ಯಾಮಾರಾದಲ್ಲಿ ಸೆರೆ ಆಗಿದೆ.

RELATED ARTICLES  ನೀಲ ನಕ್ಷೆ ಇಲ್ಲದೆ ಶಿರಸಿ ಮಾರಿಕಾಂಬಾ ಜಾತ್ರೆ! ಗರಂ ಆದ ಜಿಲ್ಲಾಧಿಕಾರಿಗಳು

ಅಂಗಡಿಯ ಮಾಲೀಕ, ಚಂದ್ರಕಾಂತ್ ಭಂಡಾರಿ ಹೇಳುವ ಪ್ರಕಾರ, ಒಂದೆರಡು ಹಾಲಿನ ಪ್ಯಾಕೆಟ್ ಕಳ್ಳತನ ಪ್ರಕರಣಗಳು ಆಗಾಗ ನಡೆಯುತ್ತಿರುತ್ತದೆ. ಆದರೆ ಈ ಬಾರಿ ಅತಿ ಹೆಚ್ಚಿನ ಮೊತ್ತದ ಹಾಲಿನ ಪ್ಯಾಕೆಟ್ ಕದ್ದೊಯ್ದಿದ್ದಾನೆ.

RELATED ARTICLES  ಇತಿಹಾಸ ಸಮ್ಮೇಳನದಲ್ಲಿ ಪ್ರೊ.ಶುಭಚಂದ್ರ ಅವರಿಗೆ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ

ಒಂದು ವಾರದಲ್ಲಿ ಎರಡು ಬಾರಿ ಕಳ್ಳತನವಾಗಿದೆ. ಕಳ್ಳತನ ನಡೆಸಿದ ವ್ಯಕ್ತಿ ಅಪರಿಚಿತನಾಗಿದ್ದು, ಈತನ ಮುಖಚಹರೆಯ ಬಗ್ಗೆ ಸ್ಥಳೀಯರಿಗೂ ಮಾಹಿತಿ ಇಲ್ಲ ಎಂದಿದ್ದಾರೆ.

ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.