ದೇವನ ದಾರಿಯು ಸುಗಮ
ನಿನ್ನ ನಡೆಯೆ ವಕ್ರ.
ಕುಣಿಯಲು ಬಾರದ ನರ್ತಕನು
ನೆಲವೇ ಡೊಂಕೆಂದ- ಕಬೀರ.
ದೇವನೆಡೆಗೆ ಸಾಗಲು ದಾರಿ ಸುಗಮವಾಗಿದೆ. ಆದರೆ ಆ ದಾರಿಯಲ್ಲಿ ನಡೆಯದೇ ತನ್ನದೇ ಆದ ದಾರಿಯಲ್ಲಿ ನಡೆದು ದೇವನನ್ನು ತಲ್ಪಲಾರದೇ ಜೀವನು ನಿರಾಶನಾಗುತ್ತಿದ್ದಾನೆ. ಆದರೆ ತನ್ನ ತಪ್ಪನ್ನು ಅರಿಯದೇ
ದೇವನನ್ನೇ ಆಕ್ಷೇಪಿಸುವ ಮಾನವ ತಾನು ವಕ್ರ ದಾರಿಯಲ್ಲಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಂಡಿಲ್ಲ. “ನಾನು ಸರಿಯಾಗಿದ್ದೇನೆ ಜಗತ್ತೇ ಸರಿ ಇಲ್ಲ ” ಎನ್ನುವ ಮನೋಭಾವ ಅವನದ್ದು. ಅದನ್ನೇ ಕಬೀರರು ಕುಣಿಯಲು ಬಾರದ ನರ್ತಕನು ನೆಲವೇ ಡೊಂಕೆಂದ ಎಂದಿದ್ದು.
ಕವಿವಾಣಿ ಯೊಂದು ಇದನ್ನು ಹೇಳಿದ್ದು ಹೀಗೆ …. ಎಲ್ಲಿಗೋ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ ಅಂತಾ.
ನಮ್ಮ ಗುರಿ ದಾರಿ ಸ್ಪಷ್ಟವಾಗಿರದಿದ್ದರೆ ನಾವು ಜೀವನದ ಪಯಣದಲ್ಲಿ ಏಕಾಂಗಿಯಾಗುತ್ತೇವೆ. ನಾವು ದೇವರನ್ನು ತಲುಪುವ ದಾರಿಯನ್ನು ತಿಳಿದುಕೊಳ್ಳೋಣ. ಅದೇ ಮಾರ್ಗದಲ್ಲಿ ನಡೆಯೋಣ . ಆ ದಯಾ ಸಿಂಧುವಿನಲ್ಲಿ ಒಂದು ಬಿಂದುವಾಗೋಣ ….
*ಡಾ.ರವೀಂದ್ರ ಭಟ್ಟ ಸೂರಿ*