ಹೊನ್ನಾವರ: ಕರೋನಾ ಪೀಡಿತರ ಸಹಾಯಕ್ಕಾಗಿ ರಾಜ್ಯದ ಅತ್ಯುತ್ತಮ ಸಹಕಾರಿ ಪ್ರಶಸ್ತಿ ಪಡೆದಿರುವ ಸೇಫ್ ಸ್ಟಾರ್ ಸಮೂಹ ಸಂಸ್ಥೆಯ ವತಿಯಿಂದ ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ 1.5ಲಕ್ಷ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 1ಲಕ್ಷ ರೂಪಾಯಿಗಳ ಚೆಕನ್ನು ಸೇಫ್ ಸ್ಟಾರ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ.ಜಿ. ಶಂಕರರವರು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಬದಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ, ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಎನ್.ಎಸ್. ಹೆಗಡೆ ಬಿ.ಜೆ.ಪಿ ತಾಲೂಕಾ ಅಧ್ಯಕ್ಷರಾದ ಶ್ರೀ ರಾಜು ಭಂಡಾರಿ, ಶ್ರೀ ಶಿವರಾಜ ಮೇಸ್ತ, , ಶ್ರೀ ಟಿ.ಎಸ್. ಹೆಗಡೆ, ಶ್ರೀ ಸುರೆಶ ಹೊನ್ನಾವರ, ಶ್ರೀ ವಿ.ಎಸ್. ಕಿಮಾನಿಕರ, ಶ್ರೀ ಲಿಫರ್ಡ ರೊಡ್ರಿಗೀಸ್, ಶ್ರೀ ತಿಮ್ಮಣ್ಣ ಭಟ್, ಶ್ರೀ ಎಮ್.ಎಸ್ ಹೆಗಡೆ, ಶ್ರೀ ಎಮ್.ಡಿ ಗೌಡ, ಶ್ರೀ ದತ್ತಾತ್ರಯ ಮೇಸ್ತಾ, ಶ್ರೀ ಮಹೇಶ ಶೆಟ್ಟಿ, ಶ್ರೀ ಕೇಶವ ಮೇಸ್ತಾ ಹಾಜರಿದ್ದರು.
ಸೇಫ್ ಸ್ಟಾರ್ ಸಮೂಹ ಸಂಸ್ಥೆಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.